ಬೆಳ್ತಂಗಡಿ, ಜು 11 (DaijiworldNews/HR): ಅನಾದಿ ಕಾಲದಿಂದ ಆಚರಿಸಿಕೊಂಡು ಬರುತ್ತಿದ್ದ ಕೊರಗಜ್ಜನ ಗುಡಿಗೆ ಕಿಡಿಗೇಡಿಗಳು ಬೆಂಕಿಯಿಟ್ಟಿರುವ ಘಟನೆ ಬೆಳ್ತಂಗಡಿ ತಾಲೂಕಿನ ಬಜಿರೆ ಗ್ರಾಮದ ಬಾಡಾರು ಕೊರಂಗಲ್ಲುವಿನಲ್ಲಿ ನಡೆದಿದೆ.
ಬೆಳ್ತಂಗಡಿ-ಬಂಟ್ವಾಳ ತಾಲೂಕು ಗಡಿ ಭಾಗದಲ್ಲಿರುವ ಇಲ್ಲಿಯ ಬಾಡಾರು ಎಂಬಲ್ಲಿ ಜನವರಿ ತಿಂಗಳಿನಲ್ಲಿ ವರ್ಷಂಪ್ರತಿ ದೊಂಪದಬಲಿ ಉತ್ಸವ ಜರಗಿದ ಮರುದಿನ ಈ ಕೊರಗಜ್ಜನ ಗುಡಿಯಲ್ಲಿ ಸಾರ್ವಜನಿಕ ನೇಮೋತ್ಸವ ನಡೆಯುತ್ತ ಬರುತ್ತಿತ್ತು.
ಇನ್ನು ಗುಡಿಯ ಜಾಗದ ವಿಚಾರ ಮತ್ತು ಆಡಳಿತದ ವಿಚಾರದಲ್ಲಿ ತಗಾದೆಗಳು ನಡೆಯುತ್ತಿತ್ತು ಎನ್ನಲಾಗಿದೆ.
ಇದೀಗ ಕೊರಗಜ್ಜನ ಗುಡಿಗೆಬೆಂಕಿ ಇಟ್ಟಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.
ಹೆಚ್ಚಿನ ಮಾಹಿತಿಗಾಗಿ ನೀರಿಕ್ಷಿಸಲಾಗುತ್ತಿದೆ.