ಉಡುಪಿ, ಜು 11 (DaijiworldNews/HR): ಕರಾವಳಿಯ ಜನ ಮೆಚ್ಚಿದ ದಾಯ್ಜಿವರ್ಲ್ಡ್ ವಾಹಿನಿ ಉಡುಪಿ ಸ್ಟುಡಿಯೋದಿಂದ ಕರಾವಳಿ ಕರ್ನಾಟದ ಟಿವಿ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಪ್ರೌಡಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ 'ದಾಯ್ಜಿ ಅತ್ಯಾಂಕ್ಷರಿ' ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಈಗಾಗಲೇ ದಾಯ್ಜಿ ಅಂತ್ಯಾಕ್ಷರಿ ಕಾರ್ಯಕ್ರಮದ ನೊಂದಣಿ ಪ್ರಕ್ರಿಯೆಯು ಆರಂಭವಾಗಿದ್ದು, ಜುಲೈ 18 ರಂದು ನೊಂದಾವಣಿಗೆ ಕೊನೆಯ ದಿನವಾಗಿರುತ್ತದೆ. ಈ ಸ್ಪರ್ಧೆಯು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿದ್ದು, ಲಯ,ತಾಳ, ಹಾಡು ಮತ್ತು ಸಂಗೀತಾ ಉಪಕರಣಗಳ ಜ್ಙಾನವಿರಬೇಕಾಗಿರುತ್ತದೆ. ಸಂಪೂರ್ಣಾ ಕಾರ್ಯಕ್ರಮವು ದಾಯ್ಜಿವರ್ಲ್ಡ್ 24*7 ವಾಹಿನಿಯಿಂದ ಎಪಿಸೋಡ್ ರೂಪದಲ್ಲಿ ಪ್ರಸಾರಗೊಳ್ಳಲಿದೆ.ಈ ಸ್ಪರ್ಧೆಯು ವಿವಿಧ ಹಂತಗಳಲ್ಲಿ ನಡೆಯಲಿದೆ.
ಈ ಕಾರ್ಯಕ್ರಮವನ್ನು ಕರಾವಳಿ ಕರ್ನಾಟಕದ ಜನಮೆಚ್ಚಿದ ನಿರೂಪಕ ಸುಚಿತ್ ಕೋಟ್ಯಾನ್ ರವರು ನಡೆಸಿಕೊಡಲಿದ್ದಾರೆ. ಆಸಕ್ತರು ಜುಲೈ 18 ರ ಒಳಗೆ ನೊಂದಾಯಿಸುವುದು
ಸ್ಪರ್ಧೆಯ ನಿಯಾಮಾವಳಿಗಳು:
•ಪ್ರೌಢಶಾಲೆಯ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.
•ಒಂದು ಶಾಲೆಯಿಂದ ಇಬ್ಬರು ವಿದ್ಯಾರ್ಥಿಗಳನ್ನೊಳಗೊಂಡ ಒಂದು ತಂಡಕ್ಕೆ ಮಾತ್ರ ಅವಕಾಶ.
•ತಂಡಕ್ಕೆ ಆಯಾ ವಿದ್ಯಾರ್ಥಿಗಳ ಶಾಲೆಯ ಹೆಸರನ್ನು ಇಡಲಾಗುತ್ತದೆ.
•ಸ್ಪರ್ಧಿಗಳಿಗೆ ಹಾಡು, ಶೃತಿ, ತಾಳ, ಲಯ (Scale, tempo, rhythm) ಮತ್ತು ಸಂಗೀತ ಉಪಕರಣಗಳ ಬಗ್ಗೆ ಜ್ಞಾನವಿರಬೇಕು.
•ಸ್ಪರ್ಧೆಯು ಕನ್ನಡ ಭಾಷೆಯಲ್ಲಿ ನಡೆಯಲಿದ್ದು, ಕನ್ನಡ ಮತ್ತು ಹಿಂದಿ ಭಾಷೆಯ ಹಾಡುಗಳನ್ನು ಹಾಡಲು ಅವಕಾಶವಿರುತ್ತದೆ.
•ಅಂಕಗಳ ಆಧಾರದ ಮೇಲೆ ಸ್ಪರ್ಧಿಗಳನ್ನು ಮುಂದಿನ ಸುತ್ತಿಗೆ ಆಯ್ಕೆ ಮಾಡಲಾಗುವುದು.
•ಸೂಕ್ತ ಕಾರಣವಿಲ್ಲದೆ ತಂಡದ ಸ್ಪರ್ಧಿಗಳನ್ನು ಬದಲಾಯಿಸಲು ಅವಕಾಶವಿಲ್ಲ.
•ಸೆಮಿ ಫೈನಲ್ ಮತ್ತು ಫೈನಲ್ ಸುತ್ತಿನಲ್ಲಿ ಸಂಗೀತ ಉಪಕರಣಗಳೊಂದಿಗೆ ಹಾಡಲು ಅವಕಾಶ ಕೊಡಲಾಗುವುದು.
•ಸ್ಪರ್ಧೆಯು ವಿವಿಧ ಹಂತಗಳಲ್ಲಿ ನಡೆಯಲಿದ್ದು, ಸಂಚಿಕೆ (Episode) ರೂಪದಲ್ಲಿ ದಾಯ್ಜಿವರ್ಲ್ಡ್ ವಾಹಿನಿಯಲ್ಲಿ ಪ್ರಸಾರವಾಗುತ್ತದೆ.
•ದಾಯ್ಜಿವರ್ಲ್ಡ್ ಉಡುಪಿ ಸ್ಟುಡಿಯೋದಿಂದ ನೀಡುವ ನೋಂದಣಿ ಪತ್ರದಲ್ಲಿ ತಮ್ಮ ಭಾಗವಹಿಸುವಿಕೆಯನ್ನು, ಶೈಕ್ಷಣಿಕ ಸಂಸ್ಥೆಯ
ಮುಖ್ಯಸ್ಥರ ಸಹಿ ಹಾಗೂ ಮುದ್ರೆಯೊಂದಿಗೆ ಇ- ಮೇಲ್ ಅಥವಾ ಅಂಚೆಯ ಮೂಲಕ ನಿಗದಿ ಪಡಿಸಿದ ಕೊನೆಯ ದಿನಾಂಕದೊಳಗೆ
ನಮಗೆ ತಲುಪಿಸಬೇಕು.
•ಪತ್ರದಲ್ಲಿ ಭಾಗವಹಿಸುವ ಸ್ಪರ್ಧಿಗಳ ನಿಖರ ಹೆಸರು, ತರಗತಿ, ಶಿಕ್ಷಕರ ಹಾಗೂ ಪೋಷಕರ ಹೆಸರು ಮತ್ತು ಮೊಬೈಲ್
ಸಂಖ್ಯೆಯನ್ನು ನಮೂದಿಸಿರಬೇಕು. ಮುಂದಿನ ಎಲ್ಲಾ ಸಂವಹನವನ್ನು ಅವರ ಮುಖಾಂತರ ನಡೆಸಲಾಗುವುದು.
•ಭಾಗವಹಿಸಿದ ಎಲ್ಲಾ ಸ್ಪರ್ಧಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು.
•ನಿರೂಪಕರ ನಿರ್ಣಯವೇ ಅಂತಿಮ.
•ಕಾರ್ಯಕ್ರಮದಲ್ಲಿನ ಬದಲಾವಣೆ, ಸಮಯ ನಿಗದಿ, ರದ್ದು ಮಾಡುವುದು ಹಾಗೂ ದಿನಾಂಕ ಮುಂದೂಡುವ ನಿರ್ಧಾರ
ತೆಗೆದುಕೊಳ್ಳುವ ಅಧಿಕಾರ ಕಾರ್ಯಕ್ರಮದ ಸಂಯೋಜಕರಿಗಿರುತ್ತದೆ.
•ಈ ಕಾರ್ಯಕ್ರಮಕ್ಕೆ ಸಂಬಂಧಪಟ್ಟಂತಹ ಮಾಹಿತಿಯನ್ನು ಸರಿಯಾದ ಸಮಯಕ್ಕೆ ತಿಳಿಸಲಾಗುವುದು.
•ಅಂತ್ಯಾಕ್ಷರಿ ಸಂಚಿಕೆಯ ರೆಕಾರ್ಡಿಂಗನ್ನು ಉಡುಪಿಯ ಕಡಿಯಾಳಿಯಲ್ಲಿರುವ ದಾಯ್ಜಿವರ್ಲ್ಡ್ ಉಡುಪಿ ಸ್ಟುಡಿಯೋದಲ್ಲಿ
ನಡೆಸಲಾಗುತ್ತದೆ.
ವಿಜೇತ ತಂಡಗಳಿಗೆ ಪ್ರಶಸ್ತಿ ಫಲಕ, ಪ್ರಮಾಣ ಪತ್ರದ ಜೊತೆಗೆ ಆಕರ್ಷಕ ನಗದು ಬಹುಮಾನ ನೀಡಲಾಗುವುದು.
ಪ್ರಥಮ ಬಹುಮಾನ – 15,000 ಸಾವಿರ ರೂಪಾಯಿಗಳು + ಫಲಕ + ಪದಕ + ಪ್ರಮಾಣ ಪತ್ರ
ದ್ವಿತೀಯಾಬಹುಮಾನ – 10,000 ರೂಪಾಯಿಗಳು + ಫಲಕ + ಪದಕ + ಪ್ರಮಾಣ ಪತ್ರ
ತೃತೀಯಾ ಬಹುಮಾನ – 5,000 ರೂಪಾಯಿಗಳು + ಫಲಕ + ಪದಕ + ಪ್ರಮಾಣ ಪತ್ರ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
ದಾಯ್ಜಿ ವರ್ಲ್ಡ್ ಉಡುಪಿ,
ಮೂರನೇ ಮಹಡಿ,
ಮಾಂಡವಿ ಟ್ರೇಡ್ ಸೆಂಟರ್,
ಕಡಿಯಾಳಿ,ಉಡುಪಿ -576102
ಮೊಬೈಲ್ ಸಂಖ್ಯೆ - +91 73386 37683/ 82, +91 99001 61556
ಇಮೇಲ್ ವಿಳಾಸ - daijiworldudupi@gmail.com