ಕುಂದಾಪುರ, ಜು 11 (DaijiworldNews/HR): ಹಾಡಹಗಲೇ ಮನೆಗೆ ನುಗ್ಗಿ ಮೂರು ಲಕ್ಷಕ್ಕೂ ಅಧಿಕ ಚಿನ್ನಾಭರಣ ಕದ್ದೋಯ್ದ ಘಟನೆ ಶಿರೂರಿನಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಶಿರೂರು ಮಾರ್ಕೆಟ್ ಬಳಿ ರಾಕೇಶ್ ಪಟಗಾರ್ ದಂಪತಿಗಳು ವೃತ್ತಿಯಲ್ಲಿ ಶಿಕ್ಷಕರಾಗಿದ್ದು ಮಧ್ಯಾಹ್ನ ಊಟ ಮುಗಿಸಿ ಕಾಲೇಜಿಗೆ ಮರಳಿದ ಸಮಯ ನೋಡಿ ಹಿಂಬಾಗಿಲಿನಿಂದ ನುಗ್ಗಿದ ಕಳ್ಳರು 32 ಗ್ರಾಂ ಮಾಂಗಲ್ಯ ಸರ ಸೇರಿದಂತೆ, 10 ಗ್ರಾಂ ಕಿವಿಯೋಲೆ, 100 ಗ್ರಾಂ ಬೆಳ್ಳಿ ಹಾಗೂ 1000 ರೂಪಾಯಿ ನಗದು ಕದ್ದೊಯ್ದಿದ್ದಾರೆ.
ಇನ್ನು ಪಕ್ಕದ ಮನೆಗೆ ತೆರಳಿ ಅಲ್ಲೂ ಕೂಡ ಬಾಗಿಲು ಒಡೆಯುತ್ತಿರುವುದನ್ನು ನೋಡಿ ಮನೆಯವರು ಕೂಗಿದ ಬಳಿಕ ಕಳ್ಳರು ಪರಾರಿಯಾಗಿದ್ದಾರೆ. ಕೆಲವೇ ದಿನಗಳ ಹಿಂದೆ ಇದೇ ಭಾಗದಲ್ಲಿ ಸಂಜೆ ವೇಳೆ ಸುಮಾರು 35 ಲಕ್ಷಕ್ಕೂ ಅಧಿಕ ಚಿನ್ನಾಭರಣ ಕದ್ದೋಯದ್ದ ಬೆನ್ನಲೇ ಈ ಗಗನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.
ಶಿರೂರಿನಲ್ಲಿ ಹೆಚ್ಚುತ್ತಿರುವ ಗಾಂಜಾ ಚಟುವಟಿಕೆಗಳು ಇಂತಹ ಪ್ರಕರಣಕ್ಕೆ ಇನ್ನಷ್ಟು ದಾರಿ ಮಾಡಿಕೊಡುತ್ತಿದೆ. ಪೊಲೀಸರು ಇಂತಹಾ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವುದರ ಜೊತೆಗೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.