ಕಾಸರಗೋಡು, ಎ03(SS): ತಲಪಾಡಿಯ ಸಮೀಪದ ತೂಮಿನಾಡು ಎಂಬಲ್ಲಿ ನಡೆದ ರಸ್ತೆ ಅಪಘಾತದಲ್ಲಿ ರಂಗಭೂಮಿ ಕಲಾವಿದರೊಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ವಿನೋದ್ ಶೆಟ್ಟಿ ಕಯ್ಯಾರ್ ಅಪಘಾತದಲ್ಲಿ ಮೃತಪಟ್ಟಿರುವ ಕಲಾವಿದ. ತುಳುವೆರೆ ಉಡಲ್ ಜೋಡುಕಲ್ಲು ತಂಡದ ಸಂಯೋಜಕರಾಗಿದ್ದ ಇವರಿಗೆ ಕಲೆಯ ಮೇಲೆ ಅಪಾರವಾದ ಒಲವಿತ್ತು. ಕಲಾ ಪೋಷಕರಾಗಿ ರಂಗಭೂಮಿಯಲ್ಲಿ ಅಪಾರವಾದ ಸೇವೆಯನ್ನು ಸಲ್ಲಿಸಿದ್ದರು. ರಂಗದಲ್ಲಿ ಬಣ್ಣ ಹಚ್ಚಿ ಅನೇಕ ನಾಟಕಗಳಲ್ಲಿ ನಟಿಸಿ, ಮೆಚ್ಚುಗೆಯನ್ನು ಪಡೆದುಕೊಂಡಿದ್ದರು.
ವಿನೋದ್ ಶೆಟ್ಟಿ ಕಯ್ಯಾರ್ ಕೆಲ ದಿನಗಳ ಹಿಂದೆಯಷ್ಟೇ ವಿದೇಶದಿಂದ ಊರಿಗೆ ಬಂದಿದ್ದರು, ಸಂಘ ಪರಿವಾರದ ಸಕ್ರೀಯ ಕಾರ್ಯಕರ್ತರಾಗಿದ್ದ ಇವರು, ಎಲ್ಲರೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು.
ಈ ಅಪಘಾತದಲ್ಲಿ ಇನ್ನೋರ್ವ ಕಲಾವಿದ ಸುರೇಶ್ ಶೆಟ್ಟಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದೀಗ ವಿನೋದ್ ಶೆಟ್ಟಿ ಕಯ್ಯಾರ್ ಅಗಲಿಕೆ ಇಡೀ ಸಮಾಜಕ್ಕೆ ಅತೀವ ನೋವುಂಟುಮಾಡಿದೆ, ಮಾತ್ರವಲ್ಲ, ರಂಗಭೂಮಿಯ ಅನೇಕ ಕಲಾವಿದರು ಸಂತಾಪ ಸೂಚಿಸಿದ್ದಾರೆ.