ಮಂಗಳೂರು, ಎ03(SS): ನಗರದ ವಿಮಾನ ನಿಲ್ದಾಣದಿಂದ ಮುಂಬಯಿಗೆ ತೆರಳಬೇಕಾಗಿದ್ದ ಏರ್ ಇಂಡಿಯಾ ವಿಮಾನದ ಹಾರಾಟವನ್ನು ಅಧಿಕಾರಿಗಳು ರದ್ದುಪಡಿಸಿದ ಘಟನೆ ನಡೆದಿದೆ.
ತಾಂತ್ರಿಕ ದೋಷ ಹಾಗೂ ಪೈಲಟ್ ಸಮಸ್ಯೆಯಿಂದಾಗಿ ವಿಮಾನದಲ್ಲಿದ್ದ ವಿದೇಶ ಹಾಗೂ ಹೊಸದಿಲ್ಲಿಗೆ ತೆರಳಬೇಕಿದ್ದ ಕೆಲವು ಪ್ರಯಾಣಿಕರು ಅನ್ಯಮಾರ್ಗವಿಲ್ಲದೆ ಇಂಡಿಗೋ ವಿಮಾನ ಏರಬೇಕಾಯಿತು. ಏರ್ ಇಂಡಿಯಾಕ್ಕೆ ಸೇರಿದ ಆ ವಿಮಾನ ಮಂಗಳೂರು ವಿಮಾನ ನಿಲ್ದಾಣದಿಂದ ಮಂಗಳವಾರ ಮಧ್ಯಾಹ್ನ 12.40 ಟೇಕ್ಆಫ್ ಆಗಬೇಕಿತ್ತು. ಆದರೆ ವಿಮಾನದಲ್ಲಿ ತಾಂತ್ರಿಕ ದೋಷದ ಕಾರಣ ನೀಡಿ ಏರ್ ಇಂಡಿಯಾದ ಅಧಿಕಾರಿಗಳು ನಿಗದಿತ ಸಮಯವನ್ನು ಎರಡು ಬಾರಿ ಮುಂದೂಡಿದರು.
ಬಳಿಕ ಪೈಲಟ್ ಇಲ್ಲ ಎಂಬ ಕಾರಣ ನೀಡಿದ ಅಧಿಕಾರಿಗಳು ವಿಮಾನಯಾನವನ್ನೇ ರದ್ದುಪಡಿಸಿದರು. ಬುಧವಾರ (ಎ.03) ಬೆಳಗ್ಗೆ 6 ಗಂಟೆಯ ವಿಮಾನದಲ್ಲಿ ಪ್ರಯಾಣಿಕರನ್ನು ಮುಂಬಯಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಏರ್ ಇಂಡಿಯಾದಲ್ಲಿದ್ದ ಪ್ಯಾಸೆಂಜರ್ಗಳ ಪೈಕಿ ವಿದೇಶ ಹಾಗೂ ದಿಲ್ಲಿಗೆ ತೆರಳಬೇಕಿದ್ದ ಪ್ರಯಾಣಿಕರಿದ್ದರು. ಏರ್ ಇಂಡಿಯಾ ಬದಲಿ ವ್ಯವಸ್ಥೆ ಮಾಡದ ಪರಿಣಾಮ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸಿದರು.