ಮಂಗಳೂರು, ಜು 10 (DaijiworldNews/MS): ಕರಾವಳಿಯಲ್ಲಿ ಭಾನುವಾರದಂದು ಮಳೆ ತುಸು ತಗ್ಗಿದ್ದು, ದಕ್ಷಿಣ ಕನ್ನಡದಲ್ಲಿ ಕೆಲ ಕಾಲ ಬಿಸಿಲಿನ ವಾತಾವರಣ ಕಂಡುಬಂದರೆ ಉಡುಪಿಯಲ್ಲಿ ಹಲವೆಡೆ ಬಿಟ್ಟು ಬಿಟ್ಟು ಮಳೆಯಾಗಿದೆ.
ಇನ್ನು 10ರಿಂದ 13ರ ತನಕ ಉತ್ತಮ ಮಳೆಯಾಗುವ ಸಾಧ್ಯತೆ ಇದ್ದು ಹವಾಮಾನ ಇಲಾಖೆ ಮುನ್ಸೂಚನೆಯಾಗಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ.
ಬೆಳ್ತಂಗಡಿ, ಉಜಿರೆ , ವೇಣೂರು ಮಂಡ್ತಾರು , ಪುಂಜಾಲಕಟ್ಟೆ, ಉಪ್ಪಿನಂಗಡಿ ಮೂಡುಬಿದಿರೆ ಸಹಿತ ಸಾಧಾರಣ ಮಳೆಯಾಗಿದೆ. ಕಡಬದಲ್ಲಿ ಎರಡು ಬಾರಿ ಉತ್ತಮ ಮಳೆಯಾಗಿದೆ. ಉಳಿದಂತೆ ಎಲ್ಲಾ ಕಡೆ ಮಳೆ ಕಡಿಮೆಯಾಗಿತ್ತು.
ಇನ್ನು ಉಡುಪಿಯಲ್ಲಿ ಕುಂದಾಪುರ, ಬೈಂದೂರು, ಮಾಳ ಕಾರ್ಕಳ, ಹೆಬ್ರಿ , ಪಡುಬಿದ್ರಿ, ಕಾಂತಾವರ ಉತ್ತಮ ಮಳೆ ಸುರಿದಿದ್ದು ಉಳಿದಂತೆ ಮೋಡ ಕವಿದ ವಾತಾವರಣದ ನಡುವೆ ಬಿಟ್ಟಿ ಬಿಟ್ಟು ಮಳೆಯಾಗುತ್ತಿತ್ತು.