ಬಂಟ್ವಾಳ, ಜು 09 (DaijiworldNews/SM): ಜಮ್ಮುಕಾಶ್ಮೀರದಲ್ಲಿ ಮಳೆಯ ಕಾರಣ ಅಲ್ಲಲ್ಲಿ ಭೂಕುಸಿತಗಳು ಕಾಣುತ್ತಿದ್ದು, ಅಮರನಾಥ ಯಾತ್ರೆಗೆ ತೆರಳಿದ್ದ ದ.ಕ.ಜಿಲ್ಲೆಯ 20 ಮಂದಿ ಸೇಫ್ ಎಂದು ತಿಳಿದು ಬಂದ ಬೆನ್ನಲ್ಲೇ ಇದೀಗ ವ್ಯಕ್ತಿಯೋರ್ವರು ವಿಡಿಯೋ ಕಳುಹಿಸಿ ನಾನು ಸೇಫ್ ಎಂದು ತಿಳಿಸಿದ್ದಾರೆ.
ಬಂಟ್ವಾಳ ತಾಲೂಕಿನ ಬೋಳಂತೂರು ನಿವಾಸಿ ಅಭಿಲಾಷ್ ಎಂಬವರು ವಿಡಿಯೋ ಒಂದನ್ನು ಕಳುಹಿಸಿದ್ದಾರೆ. ನಾನು ಓಬ್ಬನೇ ಯಾತ್ರೆ ಮಾಡಿದ್ದು, ಯಾವುದೇ ಸಮಸ್ಯೆ ಆಗಿಲ್ಲ ಎಂದು ವಿಡಿಯೋ ಸಂದೇಶ ಕಳುಹಿಸಿದ್ದಾರೆ. ಪುರಾಣಿ ಮಂಡಿ ಆಶ್ರಮದಲ್ಲಿ ಸೇಫ್ ಆಗಿದ್ದೇನೆ ಎಂದು ವಿಡಿಯೋ ಮಾಡಿ ಕಳುಹಿಸಿದ್ದಾರೆ. ಅವರು ತಂಗಿರುವ ಆಶ್ರಮದಿಂದ 280 ಕಿಮೀ ಇದ್ದು, ಮಿಲಿಟರಿ ಅವರು ಹೋಗಲು ಅನುವು ಮಾಡಿದ ಕೂಡಲೇ ಅಮರನಾಥ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದು ವಾಪಸು ಬರುತ್ತೇವೆ ಎಂದು ತಿಳಿಸಿದ್ದಾರೆ.
ತಂಗಿರುವ ಕ್ಯಾಂಪ್ ನಲ್ಲಿ ಊಟ ವಸತಿ ಸಹಿತ ಎಲ್ಲವನ್ನು ಉಚಿತವಾಗಿ ನೀಡುತ್ತಿದ್ದಾರೆ ,ಯಾವುದೇ ಸಮಸ್ಯೆ ಇಲ್ಲ. ನನ್ನ ಜೊತೆ ಬೇರೆ ಬೇರೆ ಕಡೆಗಳಿಂದ ಬಂದಿರುವ ಅನೇಕ ಯಾತ್ರಾರ್ಥಿಗಳು ಸೇಫ್ ಅಗಿ ಇದ್ದಾರೆ ಎಂದು ಅವರು ತಿಳಿಸಿದ್ದಾರೆ. ಸದ್ಯ ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ವಿಪರೀತ ಮಳೆಯ ಕಾರಣದಿಂದಾಗಿ ಅವರ ಸಂಪರ್ಕ ಅಸಾಧ್ಯವಾಗಿದೆ.