ಬಂಟ್ವಾಳ, ಜು 08 (DaijiworldNews/HR): ತಾಲೂಕಿನಾದ್ಯಂತ ಮಳೆಯ ಆರ್ಭಟ ಮುಂದುವರಿದಿದ್ದು ಹಲವು ಮನೆಗಳಿಗೆ ಹಾನಿಯಾಗಿದೆ.
ಪುಣಚ ಗ್ರಾಮದ ಬಡೆಕನಡ್ಕ ಎಂಬಲ್ಲಿ ಶ್ರೀ ಚೋಮ ಎಂಬವರ ವಾಸ್ತವ್ಯದ ಮನೆಗೆ ಭಾಗಶಃ ಹಾನಿಯಾಗಿರುತ್ತದೆ. ಕೊಳ್ನಾಡು ಗ್ರಾಮದ ಕಾಡುಮಠ ಎಂಬಲ್ಲಿ ಪ್ರಭಾವತಿ ರವರ ಮನೆ ಹಾನಿಯಾಗಿದೆ, ಪುಣಚ ಗ್ರಾಮದ ಅಜ್ಜಿನಡ್ಕ ಎಂಬಲ್ಲಿ ಶ್ರೀ ರಾಮಪ್ಪ ಆಚಾರ್ಯ ಎಂಬವರ ವಾಸ್ತವ್ಯದ ಮನೆಗೆ ಭಾಗಶಃ ಹಾನಿಯಾಗಿರುತ್ತದೆ. ಬಡಗ ಬೆಳ್ಳೂರು ಗ್ರಾಮದ ನಂದಪ್ಪ ಪೂಜಾರಿ ಯವರ ವಾಸ್ತವ್ಯ ದ ಮನೆ ಮೇಲೆ ಮರ ಬಿದ್ದು ಭಾಗಶಃ ಹಾನಿ ಆಗಿರುತ್ತದೆ.
ಕೇಪು ಗ್ರಾಮದ ಕುಕ್ಕೆಬೆಟ್ಟು ಎಂಬಲ್ಲಿ ಸಂಜೀವ ಪೂಜಾರಿ ರವರ ಮನೆಯ ತಡೆಗೋಡೆ ಕುಸಿದು ಹಾನಿಯಾಗಿದೆ. ಕೊಡ್ಮಣ್ ಗ್ರಾಮದ ಕೊಡ್ಮಣ್ ಕೋಡಿ ಎಂಬಲ್ಲಿ ಸುಲೋಚನಾ ರವರ ಮನೆಗೆ ಹೊಂದಿರುವ ಸ್ನಾನಗೃಹ ಹಾಗೂ ಶೌಚಾಲಯಕ್ಕೆ ಮರ ಬಿದ್ದು ಸದ್ರಿ ಕಟ್ಟಡದ ಗೋಡೆ ಹಾಗೂ ಸಿಮೆಂಟ್ ಶೀಟು ಹಾನಿಯಾಗಿದೆ. ಸರಪಾಡಿ ಗ್ರಾಮದ ಮುದಿಮರ ಎಂಬಲ್ಲಿ ಯೋಗೀಶ್ ಎಂಬುವವರ ಮನೆಯ ಮೇಲೆ ಶನಿವಾರ ಮುಂಜಾನೆ ಗುಡ್ಡ ಕುಸಿದು ಮನೆ ಸಂಪೂರ್ಣವಾಗಿ ಹಾನಿಯಾಗಿದ್ದು ಅಪಾರ ನಷ್ಟ ಸಂಭವಿಸಿದೆ. ಪಂಜಿಕಲ್ಲು ಗ್ರಾಮದ ಪುಂಚೋಡಿ ಎಂಬಲ್ಲಿ ಲೀಲಾ ಕೋಂ ಕುಡ್ಪ ಎಂಬವರ ಮನೆ ಸಂಪೂರ್ಣ ಹಾನಿಯಾಗಿದ್ದು, ಸದ್ರಿ ಕುಟುಂಬ ಪ್ರಸ್ತುತ ಸದ್ರಿ ಮನೆಯ ಬದಿಯಲ್ಲಿರುವ ಅವರದೇ ನಿರ್ಮಾಣ ಹಂತದಲ್ಲಿರುವ ಹೊಸ ಮನೆಗೆ ಸ್ಥಳಾಂತರ ಗೊಂಡಿರುತ್ತಾರೆ.