ಬೆಳ್ತಂಗಡಿ ಜು 7 (DaijiworldNews/MS): ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ನೆಕ್ಕಿಲು ನಿವಾಸಿ ಮುಹಮ್ಮದ್ ರಾಝೀಖ್ (24) ಎಂಬವರು ಬುಧವಾರ ದುಬೈನಲ್ಲಿ ನಿಧನರಾಗಿದ್ದಾರೆ.
ಇಲ್ಲಿನ ದಾವೂದ್ ಎಂಬವರ ಪುತ್ರನಾದ ಮುಹಮ್ಮದ್ ರಾಝೀಖ್ ವಿದೇಶದಲ್ಲಿಉದ್ಯೋಗಕ್ಕಿದ್ದರು. ಕಳೆದ ವರ್ಷ ಊರಿಗೆ ಬಂದಿದ್ದ ಅವರು ವಿವಾಹವಾಗಿ ಬಳಿಕ ದುಬೈಗೆ ತೆರಳಿದ್ದರು. ದುಬೈನಲ್ಲಿಹೊಟೇಲ್ ರೂಂನಲ್ಲಿ ಮಲಗಿದ್ದ ಅವರು ನಿಗದಿತ ಸಮಯದಲ್ಲಿಎದ್ದೇಳದ ಕಾರಣ ಹೊಟೇಲ್ ಸಿಬ್ಬಂದಿ ಸಂಶಯಗೊಂಡು ಪರಿಶೀಲನೆ ನಡೆಸಿದ್ದು, ಈ ಸಂದರ್ಭ ಅವರು ಮೃತಪಟ್ಟಿರುವುದು ಗಮನಕ್ಕೆ ಬಂದಿದೆ. ಇವರಿಗೆ ನಾಲ್ಕು ತಿಂಗಳ ಮಗುವೊಂದಿದ್ದು, ಊರಿಗೆ ಬಂದು ಮಗುವಿನ ಮುಖವನ್ನು ನೋಡುವ ಮೊದಲೇ ಅವರ ಮೇಲೆ ಸಾವು ಬಂದೆರಗಿದೆ.
ಮೃತರು ಪತ್ನಿ, ನಾಲ್ಕು ತಿಂಗಳ ಮಗು, ತಂದೆ, ತಾಯಿ ಹಾಗೂ ನಾಲ್ವರು ಸಹೋದರಿಯರು, ನಾಲ್ವರು ಸಹೋದರರನ್ನು ಅಗಲಿದ್ದಾರೆ. ಇವರ ಸಾವಿಗೆ ಕಾರಣ ತಿಳಿದುಬಂದಿಲ್ಲ.