ಕಾಸರಗೋಡು, ಜು 6(DaijiworldNews/SM): ಜಿಲ್ಲೆಯಲ್ಲಿ ನಾಳೆ ( ಜುಲೈ 7) ರೆಡ್ ಅಲರ್ಟ್ ಘೋಷಿಸಿರುವುದರಿಂದ ವೃತ್ತಿಪರ ಕಾಲೇಜು ಸೇರಿದಂತೆ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಕೆ.ಇಂಪಾ ಶೇಖರ್ ಆದೇಶ ಹೊರಡಿಸಿದ್ದಾರೆ.
img src=https://daijiworld.ap-south-1.linodeobjects.com/Linode/img_tv247/ms-040723-ksdholidy.jpg>
ಪೂರ್ವ ನಿಗದಿತ ಪರೀಕ್ಷೆ ಗಳಿಗೆ ಬದಲಾವಣೆ ಇಲ್ಲ. ಶಾಲಾ ಆವರಣ ದೊಳಗೆ ಅಪಾಯಕಾರಿ ಯಾಗಿರುವ ಮರಗಳು, ಆವರಣ ಗೋಡೆ, ಹಳೆಯ ಶೌಚಾಲಯ ಹೊಂಡ ಗಳು, ಹಳೆ ಕಟ್ಟಡ ಮೊದಲಾದವುಗಳ ಬಗ್ಗೆ ಶಾಲಾ ರಕ್ಷಕ ಶಿಕ್ಷಕ ಸಂಘ, ಶಿಕ್ಷಕರು ನಾಳೆ (7 ರಂದು) ಪರಿಶೀಲಿಸಿ ಮಕ್ಕಳ ಸುರಕ್ಷತೆ ಬಗ್ಗೆ ಖಾತರಿಪಡಿಸುವಂತೆ ಜಿಲ್ಲಾಧಿಕಾರಿ ತಿಳಿಸಿ ದ್ದಾರೆ