ಕಾಸರಗೋಡು, ಜು 6(DaijiworldNews/SM): ಬೇಳ ಚೌಕಾರ್ ಪಿಲಿಪಳ್ಳದ ಕೊಳವೆ ಬಾವಿ ಏಜಂಟ್ ಥೋಮಸ್ ಕ್ರಾಸ್ತ(53) ರವರನ್ನು ಕೊಲೆಗೈದು ಶೌಚಾಲಯದ ಹೊಂಡಕ್ಕೆ ತಳ್ಳಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ತಂಡ ಬಂಧಿಸಲಾಗಿದೆ.
ಚೌಕಾರಿನ ಮುನೀರ್(40) ಮತ್ತು ಈತನ ಪತ್ನಿಯ ಸಹೋದರ ಅಶ್ರಫ್(36) ಬಂಧಿತ ಆರೋಪಿಗಳು. ತಲೆ ಮರೆಸಿ ಕೊಂಡಿದ್ದ ಅಶ್ರಫ್ ನನ್ನು ಚಿಕ್ಕ ಮಗಳೂ ರಿನಿಂದ ಬಂಧಿಸಲಾಯಿತು. ಚಿನ್ನಾಭರಣ ದರೋಡೆ ಗೈಯ್ಯಲು ಕೊಲೆ ನಡೆಸಿದ್ದಾಗಿ ಬಂಧಿತರು ತಪ್ಪೊಪ್ಪಿಕೊಂಡಿದ್ದಾರೆ. ಥೋಮಸ್ ಕ್ರಾಸ್ತ ರ ದೇಹದಲ್ಲಿದ್ದ 35 ಗ್ರಾಂ ಚಿನ್ನದ ಸರ ಮತ್ತು ಏಳು ಗ್ರಾಂ ನ ಉಂಗುರ ವನ್ನು ಕಳವುಗೈಯ್ಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವೈಭವ್ ಸಕ್ಸೇನಾ ತಿಳಿಸಿದ್ದಾರೆ.
ಕೃತ್ಯ ಬೆಳಕಿಗೆ ಬಂದು ವಾರ ದೊಳಗೆ ಆರೋಪಿ ಗಳನ್ನು ಬಂಧಿಸಲಾಗಿದೆ. ಕೃತ್ಯದ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ. ಕಳವು ಗೈದ ಚಿನ್ನಾಭರಣ ಗಳನ್ನು ವಶಪಡಿಸಿಕೊಳ್ಳಲು ಕ್ರಮ ತೆಗೆದುಕೊಳ್ಳಲಾಗಿದೆ ಮಾಡಿ ಎಂದು ಪೊಲೀಸರು ತಿಳಿಸಿದ್ದಾರೆ.
ಜುಲೈ ಒಂದರಂದು ಈ ದಾರುಣ ಕೃತ್ಯ ಬೆಳಕಿಗೆ ಬಂದಿತ್ತು. ನಾಲ್ಕು ದಿನಗಳಿಂದ ಥೋಮಸ್ ಕ್ರಾಸ್ತ ನಾಪತ್ತೆಯಾದುದರಿಂದ ಸಂಶಯಗೊಂಡು ಪರಿಸರವಾಸಿಗಳು ಗಮನಿಸಿದಾಗ ಕ್ವಾಟರ್ಸ್'ನ ಶೌಚಾಲಯದ ಹೊಂಡದಿಂದ ದುರ್ವಾಸನೆ ಕಂಡು ಬಂದಿದ್ದು , ಇದರಿಂದ ಬದಿಯಡ್ಕ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲಿಸಿದಾಗ ದಾರುಣ ಕೃತ್ಯ ಬೆಳಕಿಗೆ ಬಂದಿತ್ತು. ಜೂನ್ ೨೮ ರಿಂದ ಥೋಮಸ್ ಕ್ರಾಸ್ತ ನಿಗೂಢವಾಗಿ ನಾಪತ್ತೆಯಾಗಿದ್ದರು.
ಶೌಚಾಲಯದ ಸ್ಲಾಬ್ ನ ಒಂದು ಬದಿಯನ್ನು ತೆರೆದು ಮೃತದೇಹವನ್ನು ಗೋಣಿ ಚೀಲದಲ್ಲಿ ತುಂಬಿಸಿ ತಳ್ಳಲಾಗಿತ್ತು.
ಮೃತದೇಹದ ಮರಣೋತ್ತರ ಪರೀಕ್ಷೆ ಯನ್ನು ಕಣ್ಣೂರಿನ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆಸಲಾಗಿದ್ದು , ತಲೆಗೆ ಬಲವಾದ ಪೆಟ್ಟು ಬಿದ್ದಿರುವುದು ಪರೀಕ್ಷೆ ಯಿಂದ ತಿಳಿದುಬಂದಿತ್ತು. ತಲೆಗೆ ಕಲ್ಲು ಎತ್ತಿ ಹಾಕಿ ಇವರು ಕೊಲೆ ನಡೆಸಿರುವುದು ತನಿಖೆಯಿಂದ ತಿಳಿದು ಬಂದಿತ್ತು.
ಡಿ ವೈ ಎಸ್ಪಿ ಪಿ.ಕೆ ಸುಧಾಕರನ್, ವಿದ್ಯಾನಗರ ಠಾಣಾ ಸರ್ಕಲ್ ಇನ್ಸ್ ಪೆಕ್ಟರ್ ಪಿ. ಪ್ರಮೋದ್, ಬದಿಯಡ್ಕ ಠಾಣಾ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ವಿನೋದ್ ಕುಮಾರ್ ತನಿಖಾ ತಂಡದ ನೇತೃತ್ವ ನೀಡಿದ್ದರು.