ಉಳ್ಳಾಲ, ಜು 6(DaijiworldNews/SM): ಪ್ರಾಕೃತಿಕ ವಿಕೋಪದಡಿ ಜು. 04 ರಂದು ಮೃತಪಟ್ಟ ಸೋಮೇಶ್ವರ ಗ್ರಾಮದ ಪಿಲಾರು ಎಂಬಲ್ಲಿನ ನಿವಾಸಿ ಸುರೇಶ್ ಗಟ್ಟಿ ಮನೆಗೆ ಸಹಾಯಕ ಆಯುಕ್ತರಾದ ರಾಜು.ಕೆ ಭೇಟಿ ನೀಡಿ ಸಾಂತ್ವನ ಹೇಳಿದರು.
ಮೃತರ ಪತ್ನಿಗೆ ವೃದ್ಧಾಪ್ಯ ವೇತನ ಹಾಗೂ ಹೆಚ್ಚುವರಿ ರೂ. 20,000/- ಅನುದಾನವನ್ನು ಸರಕಾರದ ವತಿಯಿಂದ ಒದಗಿಸುವ ಪ್ರಯತ್ನ ಮಾಡುವ ಭರವಸೆ ನೀಡಿದರು.
ಈ ಸಂದರ್ಭ ಕಂದಾಯ ನಿರೀಕ್ಷಕ ಮಂಜುನಾಥ್ ಸೋಮೇಶ್ವರ ಪುರಸಭೆ ಗ್ರಾಮಕರಣಿಕೆ ಲಾವಣ್ಯ, , ಮೃತರ ಸಂಬಂಧಿ ಸುರೇಶ್ ಗಟ್ಟಿ, ಪತ್ನಿ ಶಾಂಭ ಪುತ್ರಿಯರಾದ ಪ್ರತೀಕ್ಷಾ, ದೀಕ್ಷಾ ಉಪಸ್ಥಿತರಿದ್ದರು.