ಕಾರ್ಕಳ, ಜು 06 (DaijiworldNews/HR): ಮೂಡುಬಿದಿರೆ -ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಕೆಲವೆಡೆಗಳಲ್ಲಿ ಮಳೆ ನೀರು ಇಡೀ ರಸ್ತೆಯನ್ನೇ ಆವರಿಸಿಕೊಂಡಿರುವುದರಿಂದ ವಾಹನ ಸಂಚಾರಕ್ಕೆ ತೊಡಕಾಗಿದೆ.
ಗಂಜಿಮಠ, ಕೈಕಂಬ ಪರಿಸರದ ತಗ್ಗುಪ್ರದೇಶ ರಸ್ತೆ ಪೂರ್ತಿ ಕೃತಕ ನೆರೆ ಕಾಣಿಸಿಕೊಂಡಿದ್ದು, ವಾಹನ ಚಾಲಕರು ಹಾಗೂ ಸವಾರರು ಪರದಾಡುವಂತಾಗಿದೆ.
ರಸ್ತೆಯ ಮುಖಾಮುಖಿಯಾಗಿ ಸಿಗುವ ಲಘುವಾಹನಗಳ ಓಡಾಟದಿಂದ ಕೆಸರು ಮಿಶ್ರಿತ ನೀರು ಪರಸ್ಪರ ವಾಹನಗಳು ಎರಚಿಕೊಳ್ಳುವ ಅನುಭವ ಸರ್ವೇ ಸಾಮಾನ್ಯವಾಗಿತ್ತು.
ಕೈಕಂಬದಲ್ಲಿ ಮಹಿಳೆಯ ರಕ್ಷಣೆ
ಶುಕ್ರವಾರ ಮಧ್ಯಾಹ್ನ ಸುರಿಯುತ್ತಿರುವ ಜಡಿಮಳೆಗೆ ದ್ವಿಚಕ್ರ ವಾಹನ ಚಲಾಯಿಸಿದ ಹೋಗುತ್ತಿದ್ದ ಮಹಿಳೆಯೊಬ್ಬರು ರಸ್ತೆ ಬದಿ ನೀರು ಹರಿದು ಹೋದ ಹೊಂಡದಲ್ಲಿ ಸಿಲುಕಿಕೊಂಡಿದ್ದರು. ಸ್ಥಳೀಯ ಯುವಕರಿಬ್ಬರು ನೆರವಿಗೆ ಧಾವಿಸಿದ್ದು, ದ್ವಿಚಕ್ರ ವಾಹನವನ್ನು ಹೊಂಡದಿಂದ ಮೇಲಕ್ಕೇತಿ ಮಹಿಳೆಯನ್ನು ರಕ್ಷಿಸಿದ್ದಾರೆ. ನೀರಿನಲ್ಲಿ ಕೊಚ್ಚಿ ಹೋಗಿದ್ದ ಪಾದರಕ್ಷೆಯನ್ನು ಹಿಡಿದು ಮಹಿಳೆಗೆ ಒಪ್ಪಿದ ಮಾನವೀಯ ಘಟನೆ ನಡೆದಿದೆ.
ಜರಿದ ಗುಡ್ಡೆ
ಗುರುಪುರ ಸಮೀಪದಲ್ಲಿ ಗುಡ್ಡೆ ಜರಿದಿದ್ದು, ಹಲವು ಮರಗಳು ಧರೆಶಾಯಿಯಾಗಿದೆ. ಕಳೆದ ವರ್ಷ ಇದೇ ಪರಿಸರದಲ್ಲಿ ರಾಷ್ಟ್ರೀಯ ಹೆದ್ದಾರಿಯ ಕೆಲ ಭಾಗ ಮಣ್ಣಿನೊಂದಿಗೆ ಕೊಚ್ಚಿ ಹೋಗಿದ್ದು, ಈ ಬಾರಿ ಮುನ್ನೆಚ್ಚರಿಕೆ ವಹಿಸಿದ್ದು, ತಡೆಗೋಡೆಯನ್ನು ಇಡಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ಮತ್ತೊಂದು ಪಾಶ್ವ ೯ ದಲ್ಲಿ ಜಲ್ಲಿಕಲ್ಲು ಹಾಕಿ ವಾಹನ ಸಂಚಾರಕ್ಕೆ ಅನುವುಮಾಡಲಾಗಿದೆ.