ಮಂಗಳೂರು/ಉಡುಪಿ, ಜು 06 (DaijiworldNews/HR): ಕಳೆದ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯ ಮಣಿಪುರದಲ್ಲಿ ಅತ್ಯಧಿಕ ಮಳೆ ದಾಖಲಾಗಿದ್ದು, 311 ಮಿ.ಮೀ ಮಳೆಯಾಗಿದೆ.
ಬುಧವಾರ 8.30ರಿಂದ ಇಂದು ಬೆಳ್ಳಗ್ಗೆ 8.30ರ ವರೆಗೆ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯ ಮಣಿಪುರದಲ್ಲಿ 311 ಮಿ.ಮೀ ಮಳೆಯಾಗಿದೆ. ಇದು ಉಡುಪಿ ಜಿಲ್ಲೆಯಲ್ಲೇ ಅತ್ಯಧಿಕ ಮಳೆಯಾದ ಪ್ರದೇಶವಾಗಿದೆ.
ಉಳಿದಂತೆ ಕಾರ್ಕಳದ ಕಾಂತವರದಲ್ಲಿ 307.05 ಮಿ.ಮೀ., ಉಡುಪಿಯ ಮುದರಂಗಡಿಯಲ್ಲಿ 300 ಮಿ.ಮೀ, ರೆಂಜಳದಲ್ಲಿ 287.5 ಮಿ.ಮೀ, ವಡ್ಡರಸೆಯಲ್ಲಿ 287 ಮಿ.ಮೀ, ಅತ್ರಾಡಿಯಲ್ಲಿ 285 ಮಿ.ಮೀ, ಪಾಂಡೇಶ್ವರದಲ್ಲಿ 279.5 ಮಿ.ಮೀ, ಮಲ್ಲೂರುನಲ್ಲಿ 272.5 ಮಿ.ಮೀ, ಮುಜೂರ್ ನಲ್ಲಿ 274 ಮಿ.ಮೀ, ಕಾರ್ಕಳದ ಪಲ್ಲಿಯಲ್ಲಿ 269 ಮಿ.ಮೀ ಮಳೆ ಸುರಿದಿದೆ.
ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಪಾಲಡ್ಕದಲ್ಲಿ 274.5 ಮಿ.ಮೀ ಅತ್ಯಧಿಕ ಮಳೆ ದಾಖಲಾಗಿದೆ. ಉಳಿದಂತೆ ಕೆರ್ಮಲ್ ನಲ್ಲಿ 257 ಮಿ.ಮೀ, ಚೆಲೈರಿನಲ್ಲಿ 252 ಮಿ.ಮೀ, ಬಾಲ್ಕುಂಜೆಯಲ್ಲಿ 248 ಮಿ.ಮೀ, ಪಡುಮರ್ನಾಡ್ ನಲ್ಲಿ 246.5 ಮಿ.ಮೀ, ಪಜೀರ್ ನಲ್ಲಿ 244 ಮಿ.ಮೀ, ಬೆಳುವಾಯಿಯಲ್ಲಿ 241 ಮಿ.ಮೀ, ಬಾಳದಲ್ಲಿ 238 ಮಿ.ಮೀ, ಪುತ್ತಿಗೆಯಲಿ 236 ಮಿ.ಮೀ, ಎಕ್ಕಾರ್ ನಲ್ಲಿ 233 ಮಿ.ಮೀ ಮಳೆ ಸುರಿದಿದೆ.