ಉಡುಪಿ, ಜು 6 (DaijiworldNews/MS): ಉಡುಪಿ ಜಿಲ್ಲೆಯಲ್ಲಿ ಮಳೆಯ ತೀವ್ರತೆ ಮುಂದುವರಿದ್ದು ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ನದಿಗಳ ನೀರಿನ ಮಟ್ಟ ಏರಿಕೆಯಾಗಿದ್ದು ತಗ್ಗು ಪ್ರದೇಶಗಳ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕೊಡಂಕೂರು ಭಾಗದಲ್ಲಿ ನೆರೆ ನೀರಿನಿಂದ ಹಲವು ಕುಟುಂಬಗಳು ಅಪಾಯದಲ್ಲಿ ಸಿಲುಕಿದ್ದು ಅಗ್ನಿಶಾಮಕ ದಳಮಕ್ಕಳು ಮಹಿಳೆಯರನ್ನು ರಕ್ಷಣೆ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ
ಕಲ್ಸಂಕ, ಬೈಲಕೆರೆ, ಬನ್ನಂಜೆ ಗರಡಿ ರಸ್ತೆ, ಕುಂಜಿಬೆಟ್ಟು ಭಾಗದಲ್ಲಿ ನೆರೆ ಸೃಷ್ಟಿಯಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಬನ್ನಂಜೆ-ಗರಡಿ ರಸ್ತೆ ಪರಿಸರದಲ್ಲಿ ಐವತ್ತಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿದೆ.
ನಿರಂತರ ಮಳೆಯಿಂದ ಇಂದ್ರಾಣಿ ನದಿ ಉಕ್ಕಿ ಹರಿಯುತ್ತಿದೆ. ಹಲವೆಡೆ ಮಳೆನೀರಿನಿಂದಾಗಿ ಕಾಲುವೆ ಬ್ಲಾಕ್ ಆಗಿ ಕೃತಕ ನೆರೆ ಸೃಷ್ಟಿಯಾಗಿದೆ. ಉಡುಪಿ ನಗರದ ತಗ್ಗು ಪ್ರದೇಶ, ಕೃಷಿ ಭೂಮಿ ಸಂಪೂರ್ಣ ಜಲಾವೃತಗೊಂಡಿದೆ.
ನಗರಸಭೆ ಅಧಿಕಾರಿಗಳ ತಂಡ, ಪೌರಕಾರ್ಮಿಕರ ತುರ್ತು ಕಾರ್ಯಚರಣೆ ತಂಡ ನಗರದ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಅಗ್ನಿ ಶಾಮಕ ದಳ ತಂಡ ಬೋಟುಗಳು ಸನ್ನದ್ಧವಾಗಿದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.