ಉಡುಪಿ, ಜು 4 (DaijiworldNews/SM): ರೈಲ್ವೇ ಟ್ರ್ಯಾಕ್ ನ ವಿದ್ಯುತ್ ಕಂಬದ ಮೇಲೆ ಮರವೊಂದು ಕುಸಿದು ಬಿದ್ದಿರುವ ಘಟನೆ ಉಡುಪಿ - ಬಾರ್ಕೂರು ಮಾರ್ಗ ಮಧ್ಯೆ ನಡೆದಿದೆ.
ಮರ ಬಿದ್ದ ಪರಿಣಾಮದಿಂದಾಗಿ ಎರಡು ಗಂಟೆಯಿಂದ ರೈಲು ಸಂಚಾರ ಸ್ಥಗಿತಗೊಂಡಿದೆ. ನಿಜಾಮುದ್ದೀನ್- ತಿರುವನಂತಪುರ ಎಕ್ಸ್ ಪ್ರೆಸ್ ರೈಲು ಸ್ಥಗಿತಗೊಂಡಿದೆ. ದೆಹಲಿ - ಕೇರಳ ನಡುವೆ ಸಂಚರಿಸುವ ರೈಲು ಇದಾಗಿದೆ. ತೀವ್ರ ಮಳೆಯ ಹಿನ್ನೆಲೆಯಲ್ಲಿ ಮರ ಬಿದ್ದಿದೆ.
ಘಟನೆಯ ಬಳಿಕ ಉಡುಪಿ ಜಿಲ್ಲೆಯ ಟ್ರ್ಯಾಕ್ ನಲ್ಲಿ ಓಡುವ ಎಲ್ಲಾ ರೈಲುಗಳು ಎರಡು ಗಂಟೆಯಿಂದ ಸ್ಥಗಿತಗೊಂಡಿವೆ. ರೈಲ್ವೆ ಇಲಾಖೆ ಮರ ತೆರವು ಕಾರ್ಯ ನಡೆಸುತ್ತಿದ್ದು, ವಿದ್ಯುತ್ ಸಂಪರ್ಕಿಸುವ ಕಾರ್ಯ ನಡೆಸಿದ್ದಾರೆ.