ಮಂಗಳೂರು,ಏ 02 (MSP): ಧಿಡೀರ್ ಕಾಣಿಸಿಕೊಂಡ ಧೂಳಿನ ಬಿರುಗಾಳಿಗೆ ಕರಾವಳಿಗರು ಬೆಚ್ಚಿಬಿದ್ದ ಘಟನೆ ಏ.2ರ ಮಂಗಳವಾರ ಸಂಜೆ 5.45 ರ ವೇಳೆಗೆ ನಡೆದಿದೆ. ನಗರದಲ್ಲಿ ಸಂಜೆ ವೇಳೆಗೆ ಮೋಡ ಕವಿದು ಮಳೆ ಬರುವ ವಾತಾವರಣವಿದ್ದು , ಪದವಿನಂಗಡಿ, ಬೋಂದೆಲ್ , ಕಾವೂರು ಸುತ್ತಮುತ್ತ ಧೂಳಿನ ಬಿರುಗಾಳಿ ಕಾಣಿಸಿಕೊಂಡು ರಸ್ತೆ ಕಾಣದಾಗಿ ಸವಾರರು ಕೆಲಕಾಲ ಗಲಿಬಿಲಿಗೊಳಗಾದರು.
ಇನ್ನೊಂದೆಡೆ ಕರಾವಳಿ ವರ್ಷದ ಮೊದಲ ವರ್ಷಧಾರೆ ಹರಿದಿದೆ. ಗಾಳಿ ಆರ್ಭಟಿಸುತ್ತಾ, ಧಾರಾಕಾರವಾಗಿ ಮಳೆ ಸುರಿದಿದೆ. ಹಲವು ದಿನಗಳಿಂದ ಏರಿಕೆಯಾಗಿದ್ದ ತಾಪಮಾನದಿಂದ ಉಷ್ಣಾಂಶವು ಮಳೆಗೆ ಇಳಿದು ವಾತಾವರಣ ತಂಪಾಗಿದೆ. ಕರಾವಳಿಯ ಜನತೆ ಒಂದೆಡೆ ತಣ್ಣನೆಯ ವಾತಾವರಣಕ್ಕೆ ಫುಲ್ ಖುಷ್ ಆಗಿದ್ದು, ಇನ್ನೊಂದೆಡೆ ಧೂಳಿನ ಬಿರುಗಾಳಿಗೆ ಬೆಚ್ಚಿಬಿದ್ದಿದ್ದಾರೆ. ಕರಾವಳಿಯ ಬಂಟ್ವಾಳ, ಪುತ್ತೂರು, ಸೇರಿ ಹಲವೆಡೆ ಪ್ರದೇಶದಲ್ಲಿ ಮೊದಲ ಗಾಳಿ ಸಹಿತ ಮಳೆಯಾಗಿರುವ ವರದಿಯಾಗಿದೆ.