ಮಂಗಳೂರು, ಜು 4 (DaijiworldNews/MS): ಕರಾವಳಿಯಲ್ಲಿ ಜಿಲ್ಲೆಯಲ್ಲಿ ಜು.7ರ ವರೆಗೆ ಅರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಸೋಮವಾರ ದಿನವಿಡೀ ಇದ್ದ ಮಳೆಯಬ್ಬರ ಮಂಗಳವಾರ ಬೆಳಗ್ಗೆ ವೇಳೆಗೆ ಕೊಂಚ ಕಡಿಮೆಯಾಗಿದೆ.
ಬಂಟ್ವಾಳ ತಾಲ್ಲೂಕಿನ ಪಜೀರುವಿನಲ್ಲಿ ಮಂಗಳವಾರ ಬೆಳಿಗ್ಗೆ 8 ಗಂಟೆವರೆಗೆ 24 ಗಂಟೆಗಳಲ್ಲಿ 17.5 ಸೆಂ.ಮೀ ಮಳೆಯಾಗಿದೆ. ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಅತ್ಯಧಿಕ ಮಳೆಯಾದ ಗ್ರಾಮ.
ಉಳಿದಂತ ಮುನ್ನೂರು ಗ್ರಾಮದಲ್ಲ 18.3 ಸಿ೦ಂ.ಮೀ., ಕೋಟಕಾರಿನಲ್ಲ 15.40 ಸೆಂ.ಮೀ, ಕಿನ್ಕದಲ್ಲಿ 13.55ಸೆಂ.ಮೀ., ನಗರದ ಪಾಂಡೇಶ್ವರದಲ್ಲಿ13.25 ಸೆಂ.ಮೀ, ಬಾಳದಲ್ಲಿ 12,25ಸೆಂ.ಮೀ, ಮಂಗಳೂರು ನಗರದಲ್ಲಿ 11.9 ಸೆಂ.ಮೀ, ಚೆಳ್ತಾರುವಿನಲ್ಲಿ 11.8 ಸೆಂ.ಮೀ, ಕೆಮ್ರಾಲ್ನಲ್ಲಿ 11.45 ಸೆಂ.ಮೀ, ಮೂಡುಶೆಡ್ಡೆಯಲ್ಲಿ 11.2 ಸೆಂ.ಮೀ ಮಳೆ ಸುರಿದಿದೆ.
ಇನ್ನು ಉಡುಪಿ ಜಿಲ್ಲೆಯಲ್ಲಿ ಕುಂದಾಪುರದ ಯಡ್ತಾರೆಯಲ್ಲಿ ಅತ್ಯಧಿಕ ಮಳೆಯಾಗಿದ್ದು 13.5 ಸೆಂ.ಮೀ ದಾಖಲಾಗಿದೆ. ನಂತರದ ಸ್ಥಾನದಲ್ಲಿ ಶಿರೂರು ಇದೆ.