ಬಂಟ್ವಾಳ, ಜು 4 (DaijiworldNews/MS): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಜು.4ರ ಮಂಗಳವಾರ ಮಂಗಳೂರು, : ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಅಲ್ಲಲ್ಲಿ ಮನೆ ಸಹಿತ ಇತರ ಬೆಲೆಬಾಳುವ ವಸ್ತುಗಳಿಗೆ ಹಾನಿಯಾಗಿದ್ದು,ಅಪಾರ ನಷ್ಟ ಸಂಭವಿಸಿದ ಘಟನೆ ನಡೆದಿದೆ.
ಪೆರಾಜೆ ಗ್ರಾಮದ ಮಂಜೊಟ್ಟಿ ಎಂಬಲ್ಲಿ ಶರತ್ ಗೌಡ ಅವರ ವಾಸ್ತವ್ಯದ ಮನೆಯ ತಡೆಗೋಡೆ ಕುಸಿದು ಬಿದ್ದಿರುತ್ತದೆ . ವಾಹನ ನಿಲ್ಲಿಸಲು ಮಾಡಿದ ಸೀಟಿನ ಶೆಡ್ ಕೂಡಾ ಬಿದ್ದಿದ್ದು ಅಪಾರ ನಷ್ಟ ಸಂಭವಿಸಿದೆ. 4 ತೆಂಗಿನ ಸಸಿ ಮತ್ತು 8 ಅಡಿಕೆ ಸಸಿಗೆ ಹಾನಿಯಾಗಿರುತ್ತದೆ.
ಕನ್ಯಾನ ಗ್ರಾಮದ ಪಂಜಾಜೆ ಎಂಬಲ್ಲಿರುವ ಗಂಗಾಧರ ಎಂಬುವವರ ಮನೆಯಿಂದ ಪ್ರತ್ಯೇಕ ಇರುವ ಕೊಟ್ಟಿಗೆಗೆ ನಿನ್ನೆ ತಡರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಹಾನಿಯಾಗಿದ್ದು,ಯಾವುದೇ ಜೀವ ಹಾನಿಯಾಗಿರುವುದಿಲ್ಲ. ಅನಂತಾಡಿ ಗ್ರಾಮದ ಬಾಕಿಲ ಎಂಬಲ್ಲಿ ಶಕುಂತಳಾ ಆಚಾರ್ಯ ರ ವಾಸ್ತವ್ಯದ ಮನೆಯ ಬಚ್ಚಲುಮನೆಗೆ ತೆಂಗಿನಮರವೊಂದು ಬಿದ್ದು ಹಾನಿಯಾಗಿದೆ.
ಮಾಣಿ-ಪುತ್ತೂರು ರಸ್ತೆಯ ಮಾಣಿ ಎಂಬಲ್ಲಿ ಮರವೊಂದು ರಸ್ತೆಗೆ ಬಿದ್ದ ಪರಿಣಾಮ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.