ಪುತ್ತೂರು, ಜು 3 (DaijiworldNews/MS):ವಿವಾಹದ ಹಿಂದಿನ ದಿನವೇ ವರನ ತಂದೆ ನಾಪತ್ತೆಯಾಗಿರುವ ಕುರಿತು ಪ್ರಕರಣ ದಾಖಲಾಗಿದೆ.
ಒಳಮೊಗ್ರು ಗ್ರಾಮದ ಕುಂಬ್ರ ನಿವಾಸಿ ಉಮ್ಮರ್ ನಾಪತ್ತೆಯಾದವರು.ಜು.1ರಂದು ಮಧ್ಯಾಹ್ನ 3 ಗಂಟೆಯವರೆಗೆ ಪುತ್ತೂರಿನಲ್ಲಿದ್ದ ಅವರು ಬಳಿಕ ನಾಪತ್ತೆಯಾಗಿದ್ದು, ಮೊಬೈಲ್ ಸ್ವಿಚ್ ಆಫ್ ಆಗಿದೆ.
ಮಗನ ಮದುವೆ ಜು.3ರಂದು ಇಂದು ನಡೆಯಬೇಕಾಗಿತ್ತು. ಜು. 2ರಂದು ಮದರಂಗಿ ಶಾಸ್ತ್ರ ನಿಗದಿಯಾಗಿತ್ತು. ಈಗ ತಂದೆ ನಾಪತ್ತೆಯಾಗಿರುವ ಕಾರಣ ಕಾರ್ಯಕ್ರಮ ರದ್ದು ಮಾಡಲಾಗಿದೆ. ಮನೆಯವರು ದೂರು ದಾಖಲಿಸಿದ್ದು, ಮೊಬೈಲ್ ಲೊಕೇಶನ್ ಆಧಾರದಲ್ಲಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.