ಬಂಟ್ವಾಳ ನ 08 : ಮರಳು ವಾಹನ ಚಾಲಕರು ಲಾರಿಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸಲು ಮುಂದಾದ ಘಟನೆ ನ 8 ರ ಬುಧವಾರ ನಡೆದಿದೆ. ಪೊಲೀಸರು ಮರಳು ವಾಹನ ಚಾಲಕರ ಮೇಲೆ ವಿನಾಕಾರಣ ಪ್ರಕರಣ ದಾಖಲಿಸಿ ಜೈ ಲಿಗೆ ಕಳುಹಿಸುತ್ತಾರೆ ಎಂದು ಆರೋಪಿಸಿ ಬಿ.ಸಿರೋಡಿನ ಬ್ರಹ್ಮ ಶ್ರೀ ನಾರಾಯಣ ಗುರು ವೃತ್ತದ ಬಳಿ ಮರಳು ವಾಹನ ಚಾಲಕರು ಲಾರಿಗಳನ್ನು ನಿಲ್ಲಿಸಿ ಧಿಡೀರ್ ಧರಣಿ ಮುಂದಾದ ಘಟನೆ ಬೆಳಿಗ್ಗೆ ನಡೆದಿದೆ. ಬೆಳಿಗ್ಗೆ ರಸ್ತೆಯ ಬದಿಯಲ್ಲಿ ಲಾರಿಗಳನ್ನು ನಿಲ್ಲಿಸಿ ಧರಣಿಗೆ ಮುಂದಾದ ಮರಳು ವಾಹನ ಚಾಲಕರಿಗೆ ಪೊಲೀಸರು ತೆರಳುವಂತೆ ಸೂಚಿಸಿದಾಗ ತೆರಳದ ಚಾಲಕರಿಗೆ ಪೊಲೀಸರು ಲಾಠಿ ರುಚಿ ತೋರಿಸಲು ಮುಂದಾದಾಗ ಪರಿಸ್ಥಿತಿಯನ್ನು ಅರಿತು ಅಲ್ಲಿಂದ ಜಾಗ ಖಾಲಿ ಮಾಡಿದರು. ಪೋಲಿಸರು ಅಕ್ರಮವಾಗಿ ಪರವಾನಿಗೆ ಇಲ್ಲದ ಮರಳು ಸಾಗಾಟಗಾರರ ಮೇಲೆ ಮಾತ್ರ ಪ್ರಕರಣ ದಾಖಲಿಸುತ್ತೇವೆ, ವಿನಾಕಾರಣ ಪ್ರಕರಣ ದಾಖಲಿಸಿಲ್ಲ. ಎನ್ನುವುದು ಅವರ ಸ್ಷಷ್ಟ ವಾದ ಮಾತು.ಈ ಸಂದರ್ಭದಲ್ಲಿ ಬಂಟ್ವಾಳ ನಗರ ಠಾಣಾ ಉಪನಿರೀಕ್ಷಕ ಚಂದ್ರಶೇಖರ್. ಗ್ರಾಮಾಂತರ ಠಾಣಾ ಉಪನಿರೀಕ್ಷಕ ಪ್ರಸನ್ನ. ನಗರ ಠಾಣಾ ಅಪರಾದ ವಿಭಾಗದ ಉಪನಿರೀಕ್ಷಕ ಹರೀಶ್ ಮತ್ತು ಸಿಬ್ಬಂದಿ ಗಳು ಸ್ಥಳದಲ್ಲಿ ದ್ದು ಮುಂಜಾಗ್ರತೆ ವಹಿಸಿದ್ದರು