ಪುತ್ತೂರು, ಜು 02 (DaijiworldNews/HR): ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಯ ಸರಳಿಕಟ್ಟೆ ಹೊಸಮುಗೇರು ಎಂಬಲ್ಲಿ ಶನಿವಾರ ಎರಡು ವರ್ಷದ ಗಂಡು ಜಿಂಕೆ ಮೇಲೆ ಬೀದಿ ನಾಯಿಯೊಂದು ದಾಳಿ ಮಾಡಿರುವ ಘಟನೆ ನಡೆದಿದೆ.
ಜಿಂಕೆಯು ಮೇಯಲು ಅರಣ್ಯದ ಗಡಿಯ ಬಳಿ ಬಂದಿದ್ದು, ಬೀದಿ ನಾಯಿಯ ದಾಳಿಗೆ ತುತ್ತಾಗಿದೆ. ಸ್ಥಳೀಯರು ಕೂಡಲೇ ಅರಣ್ಯಾಧಿಕಾರಿಗಳಿಗೆ ವಿಷಯ ತಿಳಿಸಿ, ತೀವ್ರವಾಗಿ ಗಾಯಗೊಂಡಿರುವ ಜಿಂಕೆಯನ್ನು ಪಶು ಆಸ್ಪತ್ರೆಗೆ ಸಾಗಿಸುವಂತೆ ಒತ್ತಾಯಿಸಿದ್ದಾರೆ.
ಇನ್ನು ಅರಣ್ಯಾಧಿಕಾರಿಗಳು ಕೂಡಲೇ ಜಿಂಕೆಯನ್ನು ಪಶು ಚಿಕಿತ್ಸಾಲಯಕ್ಕೆ ಕರೆದೊಯ್ದರೂ, ತೀವ್ರವಾಗಿ ಗಾಯಗೊಂಡ ಜಿಂಕೆ ಸಾವನ್ನಪ್ಪಿದೆ.
ಕಾರ್ಯಾಚರಣೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್, ಕರೋಲ್ ಮೊಂತೇರೊ, ಅರಣ್ಯ ಸಿಬ್ಬಂದಿ ಪ್ರತಾಪ್, ಚಾಲಕ ಕಿಶೋರ್ ಭಾಗವಹಿಸಿದ್ದರು.