ಕಾಸರಗೋಡು, ಜು1 (DaijiworldNews/MS): ಕ್ವಾಟರ್ಸ್ ಮಾಲಕರೋರ್ವರನ್ನು ಕೊಲೆಗೈದು ಶೌಚಾಲಯದ ಹೊಂಡಕ್ಕೆ ತಳ್ಳಿದ ಘಟನೆ ಕುಂಬಳೆ ಸಮೀಪದ ಸೀತಾಂಗೋಳಿಯಲ್ಲಿ ನಡೆದಿದೆ.
ಶನಿವಾರ ಸಂಜೆ ಕೃತ್ಯ ಬೆಳಕಿಗೆ ಬಂದಿದೆ. ಸೀತಾಂಗೋಳಿ ಚೌಕಾರ್ ಪಿಲಿಪಳ್ಳದ ಥೋಮಸ್ ಕ್ರಾಸ್ತ(52) ಕೊಲೆಗೀಡಾದವರು. ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿ ರುವುದರಿಂದ ಸಂಶಯಗೊಂಡು ಸ್ಥಳೀಯರು ಹುಡುಕಾಟ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಸ್ಥಳೀಯರು ನೀಡಿದ ಮಾಹಿತಿಯಂತೆ ಸ್ಥಳಕ್ಕೆ ಆಗಮಿಸಿದ ಬದಿಯಡ್ಕ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸಿದಾಗ ದಾರುಣ ಕೃತ್ಯ ಬೆಳಕಿಗೆ ಬಂದಿದೆ.
ಕೊಲೆ ಬಳಿಕ ಗೋಣಿ ಚೀಲದಲ್ಲಿ ಮೃತದೇಹವನ್ನಿರಿಸಿ ಶೌಚಾಲಯದ ಹೊಂಡದೊಳಗೆ ತಳ್ಳಿದ್ದು , ಮೃತದೇಹವನ್ನು ಆದಿತ್ಯವಾರ ಬೆಳಿಗ್ಗೆ ಹೊರ ತೆಗೆದು ಮಹಜರು ನಡೆಸಲಾಗುವುದು ಎಂದು ಬದಿಯಡ್ಕ ಠಾಣಾ ಪೊಲೀಸರು ತಿಳಿಸಿದ್ದಾರೆ.ಥೋಮಸ್ ನ ಮಾಲಕತ್ವದ ಕ್ವಾಟರ್ಸ್ ನ ಸೆಪ್ಟಿಕ್ ಟ್ಯಾ೦ಕ್ ನಲ್ಲಿ ಮೃತದೇಹ ಪತ್ತೆಯಾಗಿದೆ.
ನಾಪತ್ತೆಯಾದುದರಿಂದ ಪರಿಸರವಾಸಿಗಳು ಹುಡುಕಾಟ ನಡೆಸಿದಾಗ ಶೌಚಾಲಯದ ಹೊಂಡದ ಸ್ಲಾಬ್ ನ ಒಂದು ಬದಿ ಅರ್ಧ ತೆರೆದ ಸ್ಥಿತಿಯಲ್ಲಿ ಕಂಡು ಬಂದಿದ್ದು , ದುರ್ವಾಸನೆ ಕಂಡುಬಂದಿತ್ತು . ಇದರಿಂದ ಸಂಶಯಗೊಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು , ಸ್ಥಳಕ್ಕೆ ಆಗಮಿಸಿದ ಪೊಲೀಸರು ತಪಾಸಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ . ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಕೊಳವೆ ಬಾವಿ ಗುತ್ತಿಗೆದಾರರಾಗಿದ್ದ ಥೋಮಸ್ ಕ್ರಾಸ್ತ ಬೋರ್ ವೆಲ್ ಕಂಪೆನಿ ಜೊತೆ ಸೇರಿಕೊಂಡು ಬೋರ್ ವೆಲ್ ನಿರ್ಮಾಣ ನಡೆಸುತ್ತಿದ್ದರು. ಕೃತ್ಯದ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ