ಮಂಗಳೂರು, ಜು 01 (DaijiworldNews/HR): ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ನಿವೃತ್ತ ಉಪನ್ಯಾಸಕ ಹಾಗೂ ಖ್ಯಾತ ಚಿಂತಕ ಪ್ರೊ. ಹೆಚ್.ಪಟ್ಟಾಭಿರಾಮ ಸೋಮಯಾಜಿ ಅವರು ಜುಲೈ 1ರ ಶನಿವಾರದಂದು ನಿಧನರಾಗಿದ್ದಾರೆ.
ಇಂಗ್ಲಿಷ್ ಪ್ರಾಧ್ಯಾಪಕ ಎಚ್ ಪಟ್ಟಾಭಿರಾಮ ಸೋಮಯಾಜಿ ಅವರು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಸುಮಾರು ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ.
ಪಟ್ಟಾಭಿರಾಮ ಸೋಮಯಾಜಿ ಅವರು ಕೋಮು ಸೌಹಾರ್ದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದು, ಮಂಗಳೂರಿನಲ್ಲಿ ನಡೆದ ಪಬ್ ದಾಳಿಯ ನಂತರ ಅವರು ರಾಮಸೇನೆಯನ್ನು 'ರಾವಣ ಸೇನೆ' ಎಂದು ಕರೆದಿದ್ದು, ಈ ಹೇಳಿಕೆಯಿಂದ ನಗರದಲ್ಲಿ ಪ್ರತಿಭಟನೆಗಳು ಕೂಡ ನಡೆದಿದ್ದವು.
2012 ರಲ್ಲಿ ಸೋಮಯಾಜಿ ವಿರುದ್ಧ ಸೈದ್ಧಾಂತಿಕ ದ್ವೇಷವನ್ನು ಹೊಂದಿದ್ದ ಭಜರಂಗ ದಳದ ಕಾರ್ಯಕರ್ತರೊಬ್ಬರು ಅವರ ಮುಖದ ಮೇಲೆ ಹಸುವಿನ ಸಗಣಿ ಬಳಿದಿದ್ದ ಘಟನೆ ಕೂಡ ನಡೆದಿತ್ತು.