ಮಂಗಳೂರು, ಜೂ 30(DaijiworldNews/MS): ಆಗಸ್ಟ್ 1ರಿಂದ ಮಂಗಳೂರು ಮಹಾನಗರಪಾಲಿಕೆಯ ವ್ಯಾಪ್ತಿಯ ಕಸ ಸಂಗ್ರಹ ಮಾಡುವುದಕ್ಕೆ ಸಾಧ್ಯವಿಲ್ಲ, ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಿ ಎಂದು ಪಾಲಿಕೆಗೆ ಆ್ಯಂಟನಿ ವೇಸ್ಟ್ ಹ್ಯಾಂಡಲಿಂಗ್ ಸೆಲ್ ಲಿಮಿಟೆಡ್ ಸಂಸ್ಥೆಯು ಲೀಗಲ್ ನೋಟೀಸ್ ನೀಡಿದೆ.
ಮಹಾನಗರ ಪಾಲಿಕೆ ಆಡಳಿತವು ಉದ್ದೇಶ ಪೂರ್ವಕವಾಗಿ 68.85 ಕೋಟಿ ರೂ.ಗಳ ಬೃಹತ್ ಪ್ರಮಾಣ ಶುಲ್ಕವನ್ನು ಬಾಕಿ ಇರಿಸಿಕೊಂಡಿದ್ದು, ಹೀಗಾಗಿ ನೊಟೀಸ್ ಸಿಕ್ಕ ಏಳು ದಿನಗೊಳಗೆ ಗೆ ಹಣ ಪಾವತಿಸಬೇಕು. ಬಾಕಿ ಇರಿಸಲಾದ ದಿನದಿಂದ ಬಾಕಿ ಮೊತ್ತಕ್ಕೆ ಶೇ.18ರಷ್ಟು ಬಡ್ಡಿ ಸೇರಿಸಿ ಪೂರ್ಣ ಪಾವತಿ ಮಾಡಬೇಕು ಮಾತ್ರವಲ್ಲದೇ ಕಸ ಸಂಗ್ರಹ ಮಾಡುವುದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಿ ಎಂದು ನೊಟೀಸ್ ನಲ್ಲಿ ತಿಳಿಸಿದೆ.
ತಮ್ಮನ್ನು ಬೇಕಾದ ಷರತ್ತುಗಳಿಗೆ ಒಪ್ಪಿಕೊಳ್ಳುವಂತೆ ಮಣಿಸುವುದಕ್ಕೆ ಹೂಡಿದ ತಂತ್ರ ಇದಾಗಿದೆ. ಕಾನೂನು ಬಾಹಿರವಾಹಿ ಮೊತ್ತದಿಂದ ಕಡಿತ, ದಂಡ ಇತ್ಯಾದಿಗಳನ್ನು ಹೂಡುವ ಮೂಲಕ ತಮ್ಮನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಲಾಗಿದೆ ಎಂದು ಲೀಗಲ್ ನೊಟೀಸ್ ನಲ್ಲಿ ಹೇಳಲಾಗಿದೆ.
ಗುತ್ತಿಗೆಯಾಧಾರದಲ್ಲಿ ಕಸಸಂಗ್ರಹಣೆ ಮಾಡುತ್ತಿರುವ ಆ್ಯಂಟನಿ ಸಂಸ್ಥೆಗುತ್ತಿಗೆ ಅವಧಿ 2023ರ ಜುಲೈ ಅಂತ್ಯಕ್ಕೆ ಕೊನೆಗೊಳ್ಳಲಿದೆ. ಆಗಸ್ಟ್ 1ರಿಂದ ಮತ್ತೆ ಆರು ತಿಂಗಳ ಅವಧಿಗೆ ಟೆಂಡರ್ ಪ್ರಕ್ರಿಯೆ ಅಂತಿಮಗೊಳ್ಳುವವರೆಗೆ ಮುಂದುವರಿಸಲು ಮಂಜೂರಾತಿಯನ್ನು ಬುಧವಾರ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಅನುಮೋದಿಸಲಾಗಿದೆ.