ಉಳ್ಳಾಲ, ಜೂ 27 (DaijiworldNews/SM): ಧಾರಾಕಾರ ಸುರಿದ ಮಳೆಗೆ ಮನೆಯ ಬೃಹತ್ ತಡೆಗೋಡೆ ಕುಸಿತಗೊಂಡ ಘಟನೆ ಸೇವಂತಿಗುಡ್ಡೆಯಲ್ಲಿ ಸಂಭವಿಸಿದೆ.
ಸೇವಂತಿಗುಡ್ಡೆಯ ಜೋಸೆಫ್ ಡೇಸಾ ಅವರ ಮನೆಯ ತಡೆಗೋಡೆ ಕುಸಿದಿದೆ. ಪರಿಣಾಮ ಪಕ್ಕದ ವಿಷು ಶೆಟ್ಟಿ ಎಂಬವರ ಮನೆಗೆ ಹಾನಿಯಾಗಿದೆ. ಕುಸಿದ ನಡೆದ ವೇಳೆ ವಿಷು ಶೆಟ್ಟಿಯವರ ಮನೆಯಲ್ಲಿ ಅವರ ಪತ್ನಿ ಅಮಿತ ಇದ್ದರು. ಆದರೆ, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಸ್ಥಳೀಯ ನಗರಸಭಾ ಸದಸ್ಯ ಮುಶ್ತಾಕ್ ಪಟ್ಲ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.