ಕಾರ್ಕಳ, ಜೂ 27 (DaijiworldNews/MS): ನಗರ ವ್ಯಾಪ್ತಿಯ ಹವಾಲ್ದಾರ್ ಬೆಟ್ಟು-ಗಾಂಧಿ ಮೈದಾನ ಸಂಪರ್ಕ ರಸ್ತೆಯ ಕುರಿತು ಕಾರ್ಕಳ ಪುರಸಭೆಯ ಆಡಳಿತ ವರ್ಗ ನಿರ್ಲಕ್ಷ್ಯ ಧೋರಣೆ ತಳೆದಿದೆ ಎಂಬ ಆರೋಪ ವ್ಯಾಪಕವಾಗಿ ಕೇಳಿಬರುತ್ತಿದೆ.
ಸ್ಥಳೀಯ ನಾಗರಿಕರು ಕಳೆದ 6 ತಿಂಗಳಿಂದ ಪುರಸಭೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಹವಾಲ್ದಾರ್ ಬೆಟ್ಟು-ಗಾಂಧಿ ಮೈದಾನ ಸಂಪರ್ಕ ರಸ್ತೆಯ ಅಭಿವೃದ್ಧಿಗೆ ಶ್ರಮಿಸುವಂತೆ ಮನವಿ ಸಲ್ಲಿಸಿದ್ದರು.
ಹೀಗಿದ್ದರೂ ಕಾರ್ಕಳ ಪುರಸಭಾ ಆಡಳಿತ ವರ್ಗವು ಇದ್ಯಾವುದಕ್ಕೂ ಕ್ಯಾರೇ ಮಾಡದಿರುವುದರಿಂದ ಪರಿಸರದಲ್ಲಿ ಹೊಸ ಹೊಸ ಸಮಸ್ಯೆ ಗಳು ಕಂಡುಬರುತ್ತಿದೆ.
ಹವಾಲ್ದಾರ್ ಬೆಟ್ಟು-ಗಾಂಧಿ ಮೈದಾನ ಸಂಪರ್ಕ ರಸ್ತೆ ಅಭಿವೃದ್ಧಿ ಪಡಿದಿದರೆ ನಗರದ ಹೃದಯಭಾಗಕ್ಕೆ ತಲುಪಲು ಸನ್ನಿಹವಾಗುತ್ತದೆ.
ಅಭಿವೃದ್ಧಿ ಯಲ್ಲಿ ಮರೀಚಿಕೆ ಕಂಡು ಬಂದಿರುವ ಹವಾಲ್ದಾರ್ ಬೆಟ್ಟು-ಗಾಂಧಿ ಮೈದಾನ ಸಂಪರ್ಕ ರಸ್ತೆಯಿಂದಾಗಿ ಪ್ರತಿದಿನ ಶಾಲೆಗೆ ತೆರಳುವ ವಿದ್ಯಾರ್ಥಿಗಳು ಸಹಿತ ರಸ್ತೆಯಲ್ಲಿ ನಡೆದಾಡುವ ಸಾರ್ವಜನಿಕರು ಪುರಸಭೆಯ ಆಡಳಿತ ವರ್ಗಕ್ಕೆಹಿಡಿ ಶಾಪ ಹಾಕುವಂತಾಗಿದೆ.