ಮಂಗಳೂರು, ಜೂ 27 (DaijiworldNews/HR): ಸವಿತಾ ಚೇತನ್ ಕುಮಾರ್ ಅವರು ಮಿಸೆಸ್ ಇಂಡಿಯಾದ ಮಂಗಳೂರು ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಮಿಸೆಸ್ ಇಂಡಿಯಾದ ಮಂಗಳೂರು ಕಿರೀಟವನ್ನು ತಮ್ಮದಾಗಿಸಿಕೊಂಡಿರುವ ಸವಿತಾ ಅವರು ಮಿಸೆಸ್ ಕರ್ನಾಟಕಕ್ಕೆ ಅರ್ಹತೆಯನ್ನ ಪಡೆದುಕೊಂಡಿದ್ದಾರೆ.
ಮಂಗಳೂರಿನ ರೋಶನಿ ನಿಲಯದಲ್ಲಿ ನಡೆದ ಈ ಕಾರ್ಯಕ್ರಮವನ್ನ ಮಿಸೆಸ್ ಇಂಡಿಯಾ ಕರ್ನಾಟಕದ ನಿರ್ದೇಶಕಿ ಪ್ರತಿಭಾ ಸೌಂಶಿಮಠ್, ದ.ಕ. ಮಿಸೆಸ್ ಇಂಡಿಯಾ ನಿರ್ದೇಶಕ ದೀಪಕ್ ಗಂಗೂಲಿ, ಮರ್ಸಿ ಬ್ಯೂಟಿ ಅಕಾಡೆಮಿ ಮತ್ತು ಬ್ಯೂಟಿ ಸಲೂನ್ ನ ಮರ್ಸಿ ವೀಣಾ ಡಿಸೋಜ ಆಯೋಜಿಸಿದ್ದರು.
ಇನ್ನು ಮಿಸೆಸ್ ಇಂಡಿಯಾ ಮಂಗಳೂರು ಕಿರೀಟವನ್ನ ಪಡೆದಿರುವ ಸವಿತಾ ಅವರು ವಿದೇಶದಲ್ಲಿ ಒಂದು ದಶಕದ ಕಾಲ ಆಡಳಿತ ವ್ಯವಸ್ಥಾಪಕರಾಗಿ ಕೆಲಸ ಮಾಡಿದ ಅನುಭವವಿದೆ. ಆದರೆ ಇದೀಗ ಮಂಗಳೂರಿನಲ್ಲಿ ನೆಲೆಸಿದ್ದಾರೆ. ನೃತ್ಯ, ಛಾಯಾಗ್ರಹಣದ ಹವ್ಯಾಸವನ್ನಿಟ್ಟುಕೊಂಡಿದ್ದಾರೆ.