ಮಂಗಳೂರು, ಜೂ 26 (DaijiworldNews/SM): ಗೋವಿನ ರಕ್ಷಣೆಗೆ ಎಲ್ಲಾ ರೀತಿಯಲ್ಲೂ ಬಜರಂಗದಳ ಕ್ರಮಕೈಗೊಳ್ಳಲಿದೆ ಎಂದು ಸಂಘಟನೆ ಮುಖಂಡರು ತಿಳಿಸಿದ್ದಾರೆ.
ಈ ಬಗ್ಗೆ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಜರಂಗದಳದ ಕರ್ನಾಟಕ ದಕ್ಷಿಣ ಪ್ರಾಂತ ಸಂಚಾಲಕ ಸುನೀಲ್ ಕೆ.ಆರ್ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯ ಸರ್ಕಾರ ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಅಕ್ರಮ ಗೋಸಾಗಾಣಿಕೆ, ಗೋವುಗಳ ಬಲಿಯನ್ನು ತಡೆಯಬೇಕು. ಇಂದಿನಿಂದ ಜೂನ್ 30ರವರೆಗೆ ಚೆಕ್ ಪೋಸ್ಟ್ ತೆರೆಯಬೇಕು. ಗೋಸಾಗಾಟ ತಡೆಯಲು ವಿಶೇಷ ಪೊಲೀಸ್ ತಂಡ ರಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಗೋ ರಕ್ಷಣೆಗಾಗಿ ನಾವು ಯಾವ ಹಂತಕ್ಕೂ ಹೋಗಲು ಸಿದ್ದರಿದ್ದೇವೆ. ಈಗಿನ ಸರ್ಕಾರ ಪರೋಕ್ಷವಾಗಿ ಗೋಕಳ್ಳರಿಗೆ ಬೆಂಬಲ ನೀಡುವ ಸಂಶಯ ಮೂಡುತ್ತಿದೆ. ಗೋ ರಕ್ಷಣೆಗಾಗಿ ನಮ್ಮ ಬಜರಂಗದಳ ಕಾರ್ಯಕರ್ತರು ಸಿದ್ದರಿದ್ದಾರೆ. ಹೋರಾಟ,ಸಂಘರ್ಷ, ಪ್ರತಿಭಟನೆ ಯಾವುದಕ್ಕೂ ತಯಾರಿದ್ದಾರೆ ಎಂದರು.
ಇನ್ನು ಕುರ್ಬಾನಿಗಾಗಿ ಆಡು,ಕುರಿ, ಕೋಳಿ ಇವುಗಳ ಬಲಿ ಕೊಡಲಿ. ಆದ್ರೆ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರಬೇಡಿ. ಈ ಬಗ್ಗೆ ಮುಸ್ಲಿಂ ಮುಖಂಡರು ಯುವಕರಿಗೆ ಕರೆ ನೀಡುವಂತೆ ಪುನೀತ್ ಅತ್ತಾವರ ಮನವಿ ಮಾಡಿಕೊಂಡಿದ್ದಾರೆ.