ಕಾಸರಗೋಡು, ನ 7 : ಮಂಜೇಶ್ವರದಿಂದ ಲಕ್ಷಾಂತರ ರೂ . ಮೌಲ್ಯದ ಸುಮಾರು 72 ಕಿಲೋ ಗಾಂಜಾ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರಿಗೆ ಮಹತ್ವದ ಸುಳಿವು ಲಭಿಸದೆ.ಗಾಂಜಾ ಖದೀಮರ ಪತ್ತೆಗಾಗಿ ಪೊಲೀಸರು ತನಿಖೆಯನ್ನು ಹೊರರಾಜ್ಯಕ್ಕೆ ವಿಸ್ತರಿಸಿದ್ದಾರೆ.
ಈ ಹಿಂದೆ ಗಾಂಜಾ ಸಾಗಾಟದ ಸಂದರ್ಭದಲ್ಲಿ ಬಂಧಿತರಾದವರನ್ನು ಕೇಂದ್ರೀಕರಿಸಿ ತನಿಖೆ ನಡೆಸಿದಾಗ ಆರೋಪಿಗಳ ಬಗ್ಗೆ ಮಾಹಿತಿ ಲಭಿಸಿದೆ.
ಒರಿಸ್ಸಾ , ಆಂಧ್ರಪ್ರದೇಶ ಮೊದಲಾದ ಕಡೆಗಳಿಂದ ಬಾರಿ ಪ್ರಮಾಣದಲ್ಲಿ ಗಾಂಜಾವನ್ನು ತಂದು ನಿರ್ಜನ ಪ್ರದೇಶದಲ್ಲಿ ದಾಸ್ತಾನಿರಿಸಿ ಅಲ್ಲಿಂದ ಮೂರು , ಐದು ಕಿಲೋ ದ ಪ್ಯಾಕೆಟ್ ಗಳನ್ನಾಗಿ ಮಾಡಿ ಮಂಗಳೂರು , ಕಾಸರಗೋಡು , ಪುತ್ತೂರು ಹಾಗೂ ಇತರೆಡೆಗಳಲ್ಲಿರುವ ಏಜೆಂಟ್ ಗಳಿಗೆ ಪೂರೈಕೆ ಮಾಡುತ್ತಿದ್ದರು ಎನ್ನಲಾಗಿದೆ
ಇದು ಮಾತ್ರವಲ್ಲ ಲಾಭ ಗಿಟ್ಟಿಸಿಕೊಳ್ಳಲು ಗಾಂಜಾ ಕ್ಕೆ ಒಣಗಿದ ತರಗೆಲೆಯನ್ನು ಯನ್ನು ಬೆರೆಸಿ ಮಾರಾಟ ಮಾಡುತ್ತಿದ್ದರು ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ.
ಸೋಮವಾರ ರಾತ್ರಿ ಮಂಜೇಶ್ವರ ಮಿಂಜ ಗುಡ್ಡೆಮಾರ್ ಎಂಬಲ್ಲಿನ ನಿರ್ಜನ ಪ್ರದೇಶದ ಕೋರೆಯೊಂದರಲ್ಲಿ ಬಚ್ಚಿಡಲಾಗಿದ್ದ ಸುಮಾರು 12 ಲಕ್ಷ ರೂ ಮೌಲ್ಯದ 72 ಕಿಲೋ ಗಾಂಜಾವನ್ನು ಮಂಜೇಶ್ವರ ಪೊಲೀಸರು ವಶಪಡಿಸಿಕೊಂಡಿದ್ದರು .