ಉಡುಪಿ, ಏ02(SS): ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ 'ಮೈ ಭೀ ಚೌಕಿದಾರ್' ಆಂದೋಲನಕ್ಕೆ ಪ್ರತಿಯಾಗಿ ಕಾಂಗ್ರೆಸ್ನ 'ಚೌಕಿದಾರ್ ಚೋರ್ ಹೈ' ಚಳವಳಿ ವೈಯಕ್ತಿಕ ಘರ್ಷಣೆಯ ಹಂತಕ್ಕೆ ತಲುಪಿದೆ.
ಬಿಜೆಪಿಯ ಮೈ ಬೀ ಚೌಕೀದಾರ್ (ನಾನೂ ಚೌಕೀದಾರ) ಆಂದೋಲನಕ್ಕೆ ಪ್ರತಿಯಾಗಿ ಕಾಂಗ್ರೆಸಿನ ಚೌಕೀದಾರ್ ಚೋರ್ ಹೈ ಚಳವಳಿ ಇದೀಗ ಮತ್ತೊಂದು ಆಯಾಮ ಪಡೆದಿದೆ.
ದೇಶದ ಪ್ರಧಾನಿ ಮೋದಿಯನ್ನು ಕಳ್ಳ ಎಂದ ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹರೀಶ್ ಕಿಣಿ ಅಲೆವೂರು ಮಾಲಕತ್ವದ ಕುಕ್ಕಿಕಟ್ಟೆ ಜೋಡುರಸ್ತೆಯಲ್ಲಿ ಇರುವ ಪೆಟ್ರೋಲ್ ಬಂಕ್ನಲ್ಲಿ ಇನ್ಮುಂದೆ ಪೆಟ್ರೋಲ್, ಡೀಸೆಲ್ ಹಾಕಿಸುವುದಿಲ್ಲ ಎಂಬುವುದಾಗಿ ಮೋದಿ ಮತ್ತು ಬಿಜೆಪಿ ಅಭಿಮಾನಿಗಳು ಪ್ರಮಾಣವನ್ನು ಮಾಡಿದ್ದಾರೆ.
ಮಾತ್ರವಲ್ಲ, ಚೌಕಿದಾರ್ ಚೋರ್ ನಹೀ, ಶೇರ್ ಹೈ, ಜೈ ನರೇಂದ್ರ ಮೋದಿ, ನರೇಂದ್ರ ಭಾರತ ಎನ್ನುವ ಸಂದೇಶವನ್ನು ಕೂಡ ರವಾನಿಸಿದ್ದಾರೆ. ಹರೀಶ್ ಕಿಣಿ ಅಲೆವೂರು ಕೇವಲ ಕಾಂಗ್ರೆಸಿಗರಿಗೆ ಪೆಟ್ರೋಲ್, ಡೀಸೆಲ್ ಹಾಕಿ ವ್ಯಾಪಾರ ನಡೆಸುವುದಾದರೆ ನಡೆಸಲಿ. ನಾವು ನಿಮ್ಮ ಪೆಟ್ರೋಲ್ ಬಂಕ್ನಲ್ಲಿ ಪೆಟ್ರೋಲ್, ಡೀಸೆಲ್ ಹಾಕಿಸುವುದಿಲ್ಲ ಎಂದಿದ್ದಾರೆ.
ಇಷ್ಟೇ ಅಲ್ಲದೇ ಮೋದಿ ವಿರುದ್ಧ ಮಾತನಾಡಿದ್ದಕ್ಕೆ ಶಾರುಖ್ ಖಾನ್, ಅಮೀರ್ ಖಾನ್ ಸಿನಿಮಾ ನೋಡುವುದನ್ನು ಬಿಡುವ ಮೂಲಕ ಬಾಲಿವುಡ್ ಮಾರುಕಟ್ಟೆಯಲ್ಲಿ ಅವರ ಮೌಲ್ಯ ತಗ್ಗಿಸಿದ ದೇಶಪ್ರೇಮಿ ಯುವ ಪಡೆ ನಮ್ಮದು ಎಂದು ಸವಾಲು ಹಾಕಿದ್ದಾರೆ.
ಕಳೆದೆರಡು ದಿನಗಳ ಹಿಂದೆಯಷ್ಟೇ ಉಡುಪಿಯಲ್ಲಿ ಬಿಜೆಪಿಯ ನಾನೂ ಚೌಕಿದಾರ,ಮೈ ಭೀ ಚೌಕೀದಾರ್ಗೆ ಪ್ರತಿಯಾಗಿ ಕಾಂಗ್ರೆಸಿಗರು 50ಕ್ಕೂ ಅಧಿಕ ಕಾರು, ಅಟೋ ರಿಕ್ಷಾಗಳಲ್ಲಿ 'ಚೌಕಿದಾರ್ ಚೋರ್ ಹೈ' ಸ್ಟಿಕ್ಕರ್ ಅಳವಡಿಸಿ ಪ್ರತಿ ಪ್ರಚಾರದಲ್ಲಿ ತೊಡಗಿದ್ದರು. ಇದಕ್ಕೆ ಪ್ರತಿಯಾಗಿ ಹರೀಶ್ ಕಿಣಿ ಅಲೆವೂರು ಮಾಲಕತ್ವದ ಕುಕ್ಕಿಕಟ್ಟೆ ಜೋಡುರಸ್ತೆಯಲ್ಲಿ ಇರುವ ಪೆಟ್ರೋಲ್ ಬಂಕ್ನಲ್ಲಿ ಇನ್ಮುಂದೆ ಪೆಟ್ರೋಲ್, ಡೀಸೆಲ್ ಹಾಕಿಸುವುದಿಲ್ಲ ಎಂಬುವುದಾಗಿ ಮೋದಿ ಮತ್ತು ಬಿಜೆಪಿ ಅಭಿಮಾನಿಗಳು ಪ್ರಮಾಣವನ್ನು ಮಾಡಿದ್ದಾರೆ.