ಮಂಗಳೂರು, ಜೂ 23 (DaijiworldNews/MS): ಇನ್ ಸ್ಟಾಗ್ರಾಮ್ ಖಾತೆಗೆ ಬಂದ ಪಾರ್ಟ್ ಟೈಮ್ ಮೆಸೇಜ್ ನಂಬಿ ವ್ಯಕ್ತಿಯೊಬ್ಬರು 1,73,190 ರೂ. ಕಳೆದುಕೊಂಡಿರುವ ವ ಬಗ್ಗೆ ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತನ್ನ ಹೆಂಡತಿಯ ಇನ್ಸ್ಟಾಗ್ರಾಮ್ ಖಾತೆಗೆ ಅಪರಿಚಿತನೊಬ್ಬ ಪಾರ್ಟ್ಟೈಮ್ ಉದ್ಯೋಗ ಬಗ್ಗೆ ಸಂದೇಶ ಕಳುಹಿಸಿದ್ದ. ತಾನು ವಿಚಾರಿಸಿದಾಗ ಆ ವ್ಯಕ್ತಿ ವಾಟ್ಸ್ಆ್ಯಪ್ ಮೂಲಕ ಮೇಸೆಜ್ ಮಾಡುವಂತೆ ಸೂಚಿಸಿದ್ದ. ಅದರಂತೆ ತಾನು ಮೆಸೇಜ್ ಕಳುಹಿಸಿದ್ದು, ಆ ಬಳಿಕ ಆತ ಟೆಲಿಗ್ರಾಮ್ ವೆಬ್ಸೈಟ್ ಲಿಂಕ್ ಕಳುಹಿಸಿ ಅದರಲ್ಲಿ ರಿಜಿಸ್ಟರ್ ಮಾಡುವಂತೆ ತಿಳಿಸಿದ್ದ. ಅಲ್ಲದೆ ಟೆಲಿಗ್ರಾಮ್ ಆ್ಯಪ್ ಡೌನ್ ಲೋಡ್ ಮಾಡಿಸಿ ಟೆಲಿಗ್ರಾಮ್ ಐಡಿ ಸಂಪರ್ಕಿಸುವಂತೆ ಸೂಚಿಸಿದ. ಸದ್ರಿ ಟೆಲಿಗ್ರಾಂ ಖಾತೆದಾರರನ್ನು ಸಂಪರ್ಕಿಸಿದಾಗ ಆ್ಯಪ್ ಡೌನ್ಲೋಡ್ ಮಾಡಿ ಅದರಲ್ಲಿ ಲಾಗಿನ್ ಆಗಿ ಬ್ಯಾಂಕ್ ಖಾತೆಯಿಂದ 500 ರೂ. ಹಣವನ್ನು ಪಾವತಿಸುವಂತೆ ಹೇಳಿ ಅದಕ್ಕೆ 550 ರೂ. ಮರು ಪಾವತಿಸಿದ್ದ.
ಹೀಗೆ ಬೇರೆ ಬೇರೆ ಟಾಸ್ಕ್ ನೆಪದಲ್ಲಿ ಬ್ಯಾಂಕ್ ಖಾತೆಯಿಂದ 1,73,190 ರೂ.ವನ್ನು ಹಂತ ಹಂತವಾಗಿ ವರ್ಗಾಯಿಸಿಕೊಂಡು ಮರುಪಾವತಿ ಮಾಡದೆ ವಂಚಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.