ಮಂಗಳೂರು, ಜೂ 22 (DaijiworldNews/MS): ಕಾಂಗ್ರೆಸ್ ನಾಯಕರ ಹೇಳಿಕೆಗಳು ಮುಂದೆ ಬೇರೆ ಬೇರೆ ರೀತಿಯಾಗಿ ತಿರುಗಿ, ನಮ್ಮ ಮೈಂಡ್ ಹ್ಯಾಕ್ ಮಾಡಿದ್ದಾರೆ, ಹಾಗಾಗಿ ಹುಚ್ಚುಚ್ಚು ಹೇಳಿಕೆ ಕೊಡ್ತಿದೇವೆ ಎನ್ನಬಹುದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ , ಸಚಿವ ಸತೀಶ್ ಜಾರಕಿಹೊಳಿ ವೆಬ್ ಸೈಟ್ ಹ್ಯಾಕ್ ಹೇಳಿಕೆಗೆ ತಿರುಗೇಟು ನೀಡಿದರು.
ಮಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರ ಹೇಳಿಕೆ ಹುಚ್ಚುಚ್ಚು ಹೇಳಿಕೆಗಳು, ಇದರಲ್ಲಿ ವ್ಯತ್ಯಾಸ ಇಲ್ಲ ಎಂದು ಹೇಳಿದರು.
ಪ್ರಧಾನಿ ಮೋದಿಯವರು ನೂರಾರು ಯೋಜನೆ ಕೊಟ್ಟಿದ್ದಾರೆ, ಇವೆಲ್ಲವೂ ಕೇವಲ ಚುನಾವಣೆಗೆಂದು ಕೊಡಲಿಲ್ಲಗೆದ್ದ ಮೇಲೆ ಜನರ ಅವಶ್ಯಕತೆ ಗುರುತಿಸಿ ಮೋದಿ ಹಲವು ಯೋಜನೆ ನೀಡಿದರು. ಆದರೆ ಕಾಂಗ್ರೆಸಿಗರು ಚುನಾವಣೆಗೆ ಮೊದಲೇ ಡಂಗುರ ಹೊಡೆದರು್ ಎಂದು ವ್ಯಂಗ್ಯವಾಡಿದರು.
ಹಿಂದೆ ಸಿದ್ದರಾಮಯ್ಯ ಸರ್ಕಾರ ಇದ್ದಾಗಲೂ ಕೇಂದ್ರದಲ್ಲಿ ಬಿಜೆಪಿ ಇತ್ತು.ಆದ್ರೆ ಆಗ ಸಿದ್ದರಾಮಯ್ಯ ಮೋದಿ ಅಕ್ಕಿ ಕೊಟ್ಟರು ಅಂತ ಹೇಳಿದ್ದಾರಾ?ಆಗಲೂ ನಾನು ಕೊಟ್ಟೆ ಅಂತಾನೇ ಸಿದ್ದರಾಮಯ್ಯ ಹೇಳಿದ್ದಾರೆ.ಯಾವುದೇ ರಾಜ್ಯಗಳಿಗೆ ಕೇಂದ್ರ ಅಕ್ಕಿ ಕೊಟ್ಟಿಲ್ಲ. ಗರೀಬಿ ಕಲ್ಯಾಣ್ ಯೋಜನೆಗೆ ಬಳಸಿ ಉಳಿದರೆ ಮಾರುಕಟ್ಟೆಗೆ ಬಿಡುಗಡೆ ಮಾಡ್ತೀವಿ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಆಮ್ ಅದ್ಮೀ ಆರಂಭಿಸಿದ ಈ ಫ್ರೀ ಸ್ಕೀಂ, ಕಾಂಗ್ರೆಸ್ ಜೋಡಿಸಿಕೊಳ್ಳುತ್ತಿದೆ.ನಮ್ಮ ಸರ್ಕಾರ ಆತ್ಮನಿರ್ಭರ ಯೋಜನೆ ಮೂಲಕ ಸ್ವಾವಲಂಬಿ ಬದುಕಿಗೆ ನೆರವು ಕೊಡ್ತಿದೆ.ನಮ್ಮ ಓಟ್ ಕಡಿಮೆ ಆಗಿ ನಾವು ಅಧಿಕಾರ ಕಳೆದುಕೊಂಡಿಲ್ಲ2013ರಲ್ಲಿ ಕಾಂಗ್ರೆಸ್ ಗೆದ್ದಿತ್ತು, ಆದರೆ ಇದೇ ಜನ ಲೋಕಸಭೆಗೆ ಬಿಜೆಪಿ ಗೆಲ್ಲಿಸಿದರು.ಆಗಲೂ ಸಿದ್ದರಾಮಯ್ಯ, ಕುಮಾರಸ್ವಾಮಿ ನಾವು ಗೆಲ್ಲೋದಿಲ್ಲ ಎಂದಿದ್ದರು ಆದರೆ ಜನ ಲೋಕಸಭೆಗೆ ಬಿಜೆಪಿಗೆ ಓಟ್ ಹಾಕಿ ಗೆಲ್ಲಿಸಿದರು.
ದೇಶ ಗೆಲ್ಲಬೇಕು ಅನ್ನೋರು ಮೋದಿಯವರನ್ನ ಗೆಲ್ಲಿಸ್ತಾರೆ. ದೇಶ ಹಾಳಾಗಬೇಕು ಅನ್ನೋರು ತುಕಡೆ ಗ್ಯಾಂಗ್ ಗಳು ದೇಶ ಸೋಲಬೇಕು ಅಂತಾರೆ. ಹೊಂದಾಣಿಕೆ ರಾಜಕೀಯದ ಬಗ್ಗೆ ನನ್ನದು ನೋ ಕಾಮೆಂಟ್ಸ್.,ನಾವು ರಾಜ್ಯದ ಸೋಲು ಒಪ್ಪಿ ಕೊಳ್ತೇವೆ, ಆದರೆ ಹೀನಾಯ ಸೋಲು ಎಲ್ಲ ಎಂದು ಹೇಳಿದರು.