ಮಂಗಳೂರು, ಜೂ 20 (DaijiworldNews/SM): ರಾಜ್ಯದಲ್ಲಿ ಕಾಂಗ್ರೆಸ್ ನೀಡಿದ ಆಶ್ವಾಸನೆ ಯಂತೆ ಜನರಿಗೆ ಅಕ್ಕಿ ನೀಡಲಾಗುತ್ತಿಲ್ಲ. ಕಾಂಗ್ರೆಸ್ ಸರಕಾರ ನೀಡಿದ ಭರವಸೆಯಂತೆ ಜನರಿಗೆ ಅಕ್ಕಿ ಕೊಟ್ಟಿಲ್ಲ ಮತ್ತು ಕೊಂಡು ಕೊಂಡಿಲ್ಲ. ಇದರ ವಿರುದ್ದ ಬಿಜೆಪಿ ಇಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದೆ. ಕಾಂಗ್ರೆಸ್ ಅಕ್ಕಿ ವಿಚಾರದಲ್ಲಿ ರಾಜಕಾರಣ ಮಾಡುವ ಕುತಂತ್ರ ನಡೆಸುತ್ತಿದೆ ಎಂದು ಮಂಗಳೂರಿನಲ್ಲಿ ಕಾಂಗ್ರೆಸ್ ವಿರುದ್ಧ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, 2 ಲಕ್ಷ ಟನ್ ಅಕ್ಕಿ ಬೇಕು ಎನ್ನುವ ಬೇಡಿಕೆಯನ್ನು ಪ್ರಧಾನಿ ಯವರಿಗಾಗಲಿ , ಕೇಂದ್ರ ಅಹಾರ ಮತ್ತು ನಾಗರಿಕ ಸರಬರಾಜು ಸಚಿವರಿಗಾಗಲಿ ಕಾಂಗ್ರೆಸ್ ನಾಯಕರು ಮಾತಾಡಿಲ್ಲ. ಅಕ್ಕಿ ವಿಚಾರದಲ್ಲಿ ಕೇಂದ್ರದ ಮೇಲೆ ಗೋಬೆ ಕುರಿಸುವ ಯತ್ನ ಮಾಡಲಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ದೇಶದ ಜನರಿಗೆ 10 ಕೆ ಜಿ ಅಕ್ಕಿ ಪ್ರದಾನಿ ನೀಡಿದ್ದಾರೆ. ಕಳೆದ 9 ವರ್ಷದಿಂದ 5 ಕೆ ಜಿ ಅಕ್ಕಿಯನ್ನು ಕೇಂದ್ರ ಸರಕಾರ ನೀಡುತ್ತಿದೆ. ಇದರ ನಡುವೆ ಕಾಂಗ್ರೆಸ್ , ಅಕ್ಕಿ ರಾಜಕಾರಣ ತರುವ ಪ್ರಯತ್ನ ಮಾಡುತ್ತಿದೆ. ಚುನಾವಣೆ ಸಂದರ್ಭದಲ್ಲಿ ಜನರಿಗೆ 10 ಕೆ ಜಿ ಅಕ್ಕಿ ನೀಡುತ್ತೇವೆ ಎನ್ನುವ ಗ್ಯಾರಂಟಿ ಕಾಂಗ್ರೆಸ್ ನೀಡಿತ್ತು ಎಂದು ವಾಗ್ದಾಳಿ ನಡೆಸಿದ್ದಾರೆ.
ಜನರಿಗೆ ನಿಡಿದ ಭರವಸೆಯಂತೆ 10 ಕೆ ಜಿ ಅಕ್ಕಿ ನೀಡಬೇಕು ಮತ್ತು ಕೇಂದ್ರ ದಿಂದ ಬರುವ 5 ಕೆ ಜಿ ಸೇರಿಸಿ 15 ಕೆ ಜಿ ಅಕ್ಕಿ ನೀಡಬೇಕು. ಚುನಾವಣೆ ಬಳಿಕ ಅಧಿಕಾರಕ್ಕೆ ಏರಿ ಈಗ ಗ್ಯಾರೆಂಟಿ ಗಳಿಗೆ ಮಾರ್ಗಸೂಚಿಗಳನ್ನು ತರುತ್ತಿದ್ದಾರೆ. ಕೋವಿಡ್ ಸಂದರ್ಭ 84 ಕೋಟಿ ಜನರಿಗೆ ಪ್ರಧಾನಿ 10 ಕೆ ಜಿ ಅಕ್ಕಿ ಕೊಟ್ಟಿದ್ದಾರೆ. ಅನುಭವಿ ರಾಜಕಾರಣಿ ಸಿದ್ದರಾಮಯ್ಯ ಈ ರೀತಿ ಮಾಡುವುದು ಸರಿಯಲ್ಲ. ಕಾಂಗ್ರೆಸ್ ಗೆ ನೈತಿಕತೆ ಇದ್ದರೆ, ಮಾನ ಮರ್ಯಾದೆ ಇದ್ದರೆ ರಾಜ್ಯದ ಜನರಿಗೆ 10 ಕೆ.ಜಿ. ಅಕ್ಕಿ ನೀಡಬೇಕು. ಜನರಿಗೆ ಮೋಸ ವಂಚನೆ ಮಾಡುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ವಿದ್ಯುತ್ ಬಿಲ್ ಏರಿಕೆ ಮಾಡಿ ಗಾಯದ ಮೇಲೆ ಬರೆ ಎಳೆದಿದೆ ಎಂದು ನಳಿನ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.