ಮಂಗಳೂರು, ಜೂ 20 (DaijiworldNews/MS): ಮಂಗಳೂರು ಮಾಹಾನಗರ ಪಾಲಿಕೆ ಆಯುಕ್ತರ ಹುದ್ದೆಗೆ ಮನ್ಸೂರ್ ಅಲಿ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಮನ್ಸೂರ್ ಅಲಿ ಬಳ್ಳಾರಿ ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾಗಿದ್ದರು.
ಆದರೆ ಇದೀಗ ಈ ಆದೇಶವನ್ನು ಮಾರ್ಪಡಿಸಿ ಮನ್ಸೂರ್ ಅಲಿ ಅವ್ ಅವರನ್ನು ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತರ ಹುದ್ದೆಗೆ ವರ್ಗಾಯಿಸಲಾಗಿದೆ.
ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತರಾಗಿ ಡಾ. ಬಾಸ್ಕರ್ ಎನ್ ಅವರಿಗೆ ಸಮಕ್ಷ ಪ್ರಾಧಿಕಾರದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.
ಪಾಲಿಕೆಯ ಆಯುಕ್ತರಾಗಿದ್ದ ಚನ್ನಬಸಪ್ಪ ಕೆ. ಅವರು ಗೃಹಸಚಿವರ ಆಪ್ತ ಕಾರ್ಯದರ್ಶಿಯಾಗಿ ನೇಮಕಗೊಂಡ ಮೇಲೆ ಈ ಸ್ಥಾನ ತೆರವಾಗಿತ್ತು