ಕುಂದಾಪುರ, ಜೂ 20 (DaijiworldNews/MS): ವಿದ್ಯಾರ್ಥಿನಿಯೊಬ್ಬಳಿಗೆ ದಾರಿಯಲ್ಲಿ ಬಿದ್ದು ದೊರೆತ ಹಣ ಆಕೆಯ ಪ್ರಮಾಣಿಕತೆಯಿಂದ ಮರಳಿ ವಾರಸುದಾರ ಕೈ ಸೇರಿದ ಘಟನೆ ಕುಂದಾಪುರದಲ್ಲಿ ನಡೆದಿದೆ.
ಇಲ್ಲಿನ ಡಾನ್ ಬಾಸ್ಕೋ ಶಾಲೆಯ ೧೦ನೇ ತರಗತಿ ವಿದ್ಯಾರ್ಥಿನಿ ಧನ್ವಿ ಪೂಜಾರಿ ಮರವಂತೆ ಅವರಿಗೆ ಶಾಲೆಯ ದಾರಿಯಲ್ಲಿ ತ್ರಾಸಿಯ ಸೂಪರ್ ಮಾರ್ಕೆಟ್ ಬಳಿ 500 ರೂ. ಮುಖಬೆಲೆಯ 11ಸಾವಿರ ರೂ.ಗಳಿದ್ದ ನೋಟಿನ ಕಟ್ಟು ಸಿಕ್ಕಿದ್ದು , ಆಕೆ ಅದನ್ನು ಗಂಗೊಳ್ಳಿ ಪೊಲೀಸರಿಗೆ ಒಪ್ಪಿಸಿ ವಾರಸುದಾರರಿಗೆ ಮರಳಿಸುವಂತೆ ತಿಳಿಸಿದ್ದರು.
ಪೊಲೀಸರು ಅದರ ವಾರಸುದಾರರನ್ನು ಪತ್ತೆ ಹಚ್ಚಿ ಹಣವನ್ನು ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಾಲಕಿಯ ಪ್ರಮಾಣಿಕತೆಯನ್ನು ಮೆಚ್ಚಿ ಠಾಣಾಧಿಕಾರಿ ವಿನಯ್ ಕೊರ್ಲಹಳ್ಳಿ ಅವರು ಆಕೆಗೆ ಸ್ಟಡಿ ಟೇಬಲ್ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ.