ಮಂಗಳೂರು, ಜೂ. 18 (DaijiworldNews/SM): ಯುವಕನಿಗೆ ಚೂರಿಯಿಂದ ಇರಿದಿರುವ ಘಟನೆ ಸುರತ್ಕಲ್ ಜನತಾ ಕಾಲನಿಯಲ್ಲಿ ಗುರುವಾರ ರಾತ್ರಿ ನಡೆದಿದ್ದು, ಇದೀಗ ಆರೋಪಿ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಿ ನ ಮೂಲಕ ಬಿಡುಗಡೆಯಾಗಿದ್ದಾನೆ.
ಕಾನ ನಿವಾಸಿ ಮುಹಮ್ಮದ್ ಶಾಫಿ(35) ಚೂರಿ ಇರಿತಕ್ಕೊಳಗಾದವರು. ಅದೇ ಪರಿಸರದ ಯುವಕ ತ್ವಾಹಿರ್ (24) ಚೂರಿಯಿಂದ ಇರಿದು ಪರಾರಿಯಾಗಿದ್ದ.
ಇದೀಗ ಆರೋಪಿಗೆ ಮಂಗಳೂರಿನ ಎರಡನೇ J M F C ಆರೋಪಿಗೆ ಷರತ್ತು ಬದ್ಧ ಜಾಮೀನನ್ನು ಜೂ.17ರಂದು ನೀಡಿದೆ. ಆರೋಪಿ ಪರ ವಕೀಲರಾದ ಜೀಶಾನ್ ಅಲಿ ಸುರತ್ಕಲ್ ವಾದಿಸಿದ್ದು ತಾಜುದ್ದೀನ್ ಸಹಕರಿಸಿದ್ದರು ಎನ್ನಲಾಗಿದೆ.