ಉಳ್ಳಾಲ, ಜೂ 17 (DaijiworldNews/HR): ಮಂಗಳೂರು ಕಮೀಷನರೇಟ್ ವ್ಯಾಪ್ತಿಗೆ ಬರುವ ಉಳ್ಳಾಲ ಪೊಲೀಸ್ ಠಾಣೆಯ 14 ಸಿಬ್ಬಂದಿ ಹಾಗೂ ಕೊಣಾಜೆ ಠಾಣೆಯ 7 ಮಂದಿ ಸಿಬ್ಬಂದಿಯನ್ನು ವರ್ಗಾಯಿಸಿ ಆದೇಶ ಪೊಲೀಸ್ ಆಯುಕ್ತರ ಕಚೇರಿ ಹೊರಡಿಸಿದೆ.
ಸಿಹೆಚ್ಸಿಯವರಾದ ಕೊಣಾಜೆಯ ರವಿಚಂದ್ರ ಇವರನ್ನು ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಹಾಗೂ ಉಳ್ಳಾಲದ ಪ್ರವೀಣ್ ಶೆಟ್ಟಿ ಡಿ.ಬಿ ಇವರನ್ನು ಮಂಗಳೂರು ಪೂರ್ವ ಸಂಚಾರಿ ಠಾಣೆ ಹಾಗೂ ಸಿಪಿಸಿಯವರಾದ ಕೊಣಾಜೆಯ ಅನಿಲ್ ಕುಮಾರ್ ಇವರನ್ನು ದಕ್ಷಿಣ ಸಂಚಾರಿ ಠಾಣೆ, ಉಳ್ಳಾಲದ ಅಕ್ಬರ್ ಯದ್ರಾಮಿ ಇವರನ್ನು ಮಂಗಳೂರು ದಕ್ಷಿಣ ಪೊಲೀಸ್ ಠಾಣೆ, ಉಳ್ಳಾಲದ ರವಿ ಬಿಲ್ಲೂರು ಇವರನ್ನು ಬಜಪೆ ಠಾಣೆ, ಕೊಣಾಜೆಯ ಚಂದ್ರಕಾಂತ್, ಅನಿಲ್ ಕುಮಾರ ವೈ.ಎಂ ಬಜಪೆ ಠಾಣೆ, ಉಳ್ಳಾಲದ ಮಾಣಿಕ್ ಪಣಂಬೂರು ಠಾಣೆಗೆ, ಬಲವಂತು ಇವರನ್ನು ಸಂಚಾರಿ ಉತ್ತರ ಠಾಣೆ, ಉಳ್ಳಾಲದ ಚಿದಾನಂದ ಇವರನ್ನು ಬಜಪೆ ಠಾಣೆ ಪ್ರವೀಣ್ ಸಲೋಟಗಿ ಇವರನ್ನು ಮಂಗಳೂರು ಸಂಚಾರಿ ಠಾಣೆ ಪೂರ್ವ, ಸುರೇಶ್ ನಗ್ರಾಲ್ ಉಳ್ಳಾಲದಿಂದ ಬಜಪೆಗೆ, ಸಿದ್ದಪ್ಪ ಹಿರೇಕುಂಬಿ ಉಳ್ಳಾಲದಿಂದ ಪಣಂಬೂರು ಠಾಣೆಗೆ, ಸತೀಶ್ ಕುಮಾರ್ ಉಳ್ಳಾಲದಿಂದ ಉತ್ತರ ಠಾಣೆಗೆ, ಹನುಮ ನಾಯ್ಕ್, ಕೆಂಪರಾಜ್ ಇವರನ್ನು ಉಳ್ಳಾಲದಿಂದ ಮಂಗಳೂರು ಉತ್ತರ ಠಾಣೆಗೆ, ಸಾಗರ್ ದೇವರಕಟ್ಟಿ ಉಳ್ಳಾಲದಿಂದ ದಕ್ಷಿಣ ಪೊಲೀಸ್ ಠಾಣೆಗೆ, ದಾಕ್ಷಾಯಿಣಿ ಉಳ್ಳಾಲದಿಂದ ಬಜಪೆ, ರತ್ನವ್ವ ಕೊಣಾಜೆಯಿಂದ ಉಳ್ಳಾಲಕ್ಕೆ, ಪ್ರಿಯಾ ಬಿರಾದಾರ್ ಕೊಣಾಜೆಯಿಂದ ಬಜಪೆಗೆ, ಬರ್ಮಬಡಿಗೇರ್ ಕೊಣಾಜೆಯಿಂದ ಬಜಪೆ ಠಾಣೆಗೆ, ಪುರುಷೋತ್ತಮ್ ಕೊಣಾಜೆಯಿಂದ ಸಿಸಿಬಿ ಠಾಣೆಗೆ ವರ್ಗಾಯಿಸಲಾಗಿದೆ.
ಇನ್ನು ಉಳ್ಳಾಲದ ಸಿಹೆಚ್ ಸಿ ಯವರಾದ ಪ್ರವೀಣ್ ಶೆಟ್ಟಿ ಡಿ.ಬಿ, ಹಾಗೂ ಸಿಪಿಸಿಗಳಾದ ಅಕ್ಬರ್ ಯದ್ರಾಮಿ, ರವಿ ಬಿಲ್ಲೂರು, ಮಾಣೇಕ್, ಬಲವಂತು, ಚಿದಾನಂದ, ಪ್ರವೀಣ್ ಸಲೊಟಗಿ, ಸುರೇಶ್ ನಗ್ರಾಲ್, ಸಿದ್ದಪ್ಪ ಹಿರೇಕುಂಬಿ, ಸತೀಶ್ ಕುಮಾರ್, ಹನುಮ ನಾಯ್ಕ್, ಕೆಂಪರಾಜು, ಸಾಗರ್ ದೇವರಕಟ್ಟಿ, ದಾಕ್ಷಾಯಿಣಿ ಹಾಗೂ ಕೊಣಾಜೆಯ ರವಿಚಂದ್ರ, ಅನಿಲ್ ಕುಮಾರ್, ಚಂದ್ರಕಾಂತ್, ಅನಿಲ ಕುಮಾರ್ ವೈ.ಎಂ, ರತ್ನವ್ವ, ಪ್ರಿಯಾ ಬಿರಾದಾರ್, ಬರ್ಮಬಡಿಗೇರ್, ಪುರುಷೋತ್ತಮ್ ಇವರನ್ನು ಕಮೀಷನರೇಟ್ ವ್ಯಾಪ್ತಿಯ ವಿವಿಧ ಠಾಣೆಗಳಿಗೆ ವರ್ಗಾವಣೆಗೊಳಿಸಲಾಗಿದೆ.