ಧರ್ಮಸ್ಥಳ, ಮಾ01(SS): ಸುಮಲತಾ ಹೆಸರಿನಲ್ಲಿ ಜನರನ್ನು ಮೋಸ ಮಾಡಲು ಸಾಧ್ಯವಿಲ್ಲ, ಮಂಡ್ಯ ಜನರೆಲ್ಲರಿಗೂ ಗೊತ್ತು ನಾನ್ಯಾರು ಅಂತಾ ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಸುಮಲತಾ ಅಂಬರೀಶ್ ಮಾತನಾಡಿದ್ದು, ಬ್ಯಾಲೆಟ್ ಪೇಪರಿನಲ್ಲಿ ಗೊಂದಲ ಮೂಡಿಸಲು ನಡೆಯುತ್ತಿರುವ ಯತ್ನಗಳಿಗೆ ಪ್ರತಿಕ್ರಿಯಿಸಿದ್ದಾರೆ. ಸುಮಲತಾ ಹೆಸರಿನಲ್ಲಿ ಜನರನ್ನು ಮೋಸ ಮಾಡಲು ಸಾಧ್ಯವಿಲ್ಲ. ಹಿಂದೆ ರೈತ ಸಂಘದ ಪುಟ್ಟಣ್ಣಯ್ಯರ ವಿರುದ್ಧ ಇದೇ ತಂತ್ರ ಮಾಡಲಾಗಿತ್ತು. ಆದರೆ ಚುನಾವಣೆಯಲ್ಲಿ ಪುಟ್ಟಣ್ಣಯ್ಯ ಆರಾಮಾಗಿ ಗೆದ್ದು ಬಂದಿದ್ದರು. ಹಾಗಾಗಿ ಈ ತಂತ್ರಗಾರಿಕೆ ವರ್ಕೌಟ್ ಆಗಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುಮಲತಾ ಹೆಸರಿನಲ್ಲಿ ಜನರನ್ನು ಮೋಸ ಮಾಡಲು ಸಾಧ್ಯವಿಲ್ಲ. ಜನ ಹಾಗೆಲ್ಲ ಮೋಸ ಹೋಗಲ್ಲ. ಪರಿಚಯ ಇಲ್ಲದ ಪ್ರೊಫೈಲ್ ಅಲ್ಲ ನನ್ನದು. ಮಂಡ್ಯ ಜನರೆಲ್ಲರಿಗೂ ಗೊತ್ತು ನಾನ್ಯಾರೆಂದು. ಈ ತಂತ್ರಗಾರಿಕೆ ಮಾಡಿದವರು ಅಂದುಕೊಂಡಿರುವ ರೀತಿಯಲ್ಲಿ ಸಕ್ಸಸ್ ಆಗಲ್ಲ ಎಂದು ತಿಳಿಸಿದರು.