ಕಾರ್ಕಳ, ಏ 01 (MSP): ಫೇಸ್ಬುಕ್ ಖಾತೆಯಲ್ಲಿ ’ಮುಖ್ಯ ಚುನಾವಣಾಧಿಕಾರಿ ಕರ್ನಾಟಕ ’ ಇವರ ಚಿಹ್ನೆಯೊಂದಿಗೆ ಮತದಾರರಲ್ಲಿ ಮತಗಳ ಸೆಳೆಯುವಿಕೆಗೆ ಪ್ರಚೋದನೆ ನೀಡುವಂತಹ ಪೋಸ್ಟಿಂಗ್ ಹಾಕಿರುವ ಆರೋಪದ ಮೇರೆಗೆ ಮಧುರಾಜ್ ಶೆಟ್ಟಿ ಕಾರ್ಕಳ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚುನಾವಣಾಧಿಕಾರಿ ಕರ್ನಾಟಕ ಇವರ ಚಿಹ್ನೆಯನ್ನು ಖಾಸಗಿ ವ್ಯಕ್ತಿಯು ದುರ್ಬಳಕೆ ಮಾಡಿ ಮುಖ್ಯ ಚುನಾವಣಾಧಿಕಾರಿ ಕರ್ನಾಟಕ ಇವರೇ ಈ ರೀತಿ ಪ್ರಚಾರ ಮಾಡಿದಂತೆ ಬಿಂಬಿಸಿ ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಲಾಗಿದೆ.
ಈ ಕುರಿತು 122 ಕಾರ್ಕಳ ವಿಧಾನ ಸಭಾ ಕ್ಷೇತ್ರದ ನೋಡಲ್ ಅಧಿಕಾರಿಯಾಗಿರುವ ಕಾರ್ಕಳ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಹರ್ಷ ಕೆ ಬಿ. ನಗರ ಠಾಣೆಗೆ ದೂರು ಸಲ್ಲಿಸಿದ್ದಾರೆ.