ಕುಂದಾಪುರ, ಜೂ 10 (DaijiworldNews/HR): ಇಪ್ಪತ್ತೈದು ಅಡಿ ಆಳದ ಬಾವಿಗೆ ಮೂರು ದಿನಗಳ ಹಿಂದೆ ಬಿದ್ದ ಅಂದಾಜು ಮೂರು ವರ್ಷ ಪ್ರಾಯದ ಗಂಡು ಚಿರತೆಯೊಂದನ್ನು ಸತತ ಎರಡು ದಿನಗಳ ಕಾರ್ಯಾಚರಣೆಯ ಬಳಿಕ ಅರಣ್ಯಾಧಿಕಾರಿಗಳು ರಕ್ಷಿಸಿದ್ದಾರೆ.
ಚಿತ್ತೂರು ಹಾರ್ಮಣ್ಣು ಸಮೀಪದ ನೈಕಂಬ್ಳಿಯ ಹೊಸಮನೆ ಶೀನಪ್ಪ ಶೆಟ್ಟಿಯವರ ಮನೆಯ ಬಾವಿಗೆ ಜುಲೈ 7ರಂದು ಆಹಾರ ಅರಸಿ ಬಂದ ಅಂದಾಜು ಮೂರು ವರ್ಷ ಪ್ರಾಯದ ಚಿರತೆಯೊಂದು ಬಿದ್ದಿತ್ತು. ಈ ವಿಚಾರ ಶೀನಪ್ಪ ಶೆಟ್ಟಿ ಮನೆಯವರಿಗೆ ಮಾರನೇ ದಿನ ಗೊತ್ತಾಗಿದ್ದು, ತಕ್ಷಣ ಅರಣ್ಯಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಮಾಹಿತಿ ತಿಳಿದ ಅರಣ್ಯಾ ಸಿಬ್ಬಂದಿ ಆನಂದ ಬಳೆಗಾರ್ ಅವರು ಹಿರಿಯ ಅಧಿಕಾರಿಗಳಾದ ಡಿಸಿಎಫ್ಒ ಉದಯ ನಾಯ್ಕ್, ಎಸಿಎಫ್ ಲೋಬೋ, ಆರ್ಎಫ್ಒ ಕಿರಣ್ ಬಾಬು, ಹಾಗೂ ಅರಣ್ಯ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ರಕಗಷಣಾ ಕಾರ್ಯಾಚರಣೆಗೆ ಮುಂದಾಗದರು.
ಆದರೆ ಬಾವಿಯಲ್ಲಿ ಅಡ್ಡಲಾಗಿ ಬೃಹತ್ ಮೋಳ (holes)ಗಳಿದ್ದು ಚಿರತೆ ಅಲ್ಲಿ ಸಿಕ್ಕಿ ಹಾಕಿಕೊಂಡ ಪರಿಣಾಮ ಚಿರತೆಯ ರಕ್ಷಣೆ ಸವಾಲಾಗಿತ್ತು. ಸತತ 48 ಗಂಟೆಗಳ ಪರಿಶ್ರಮದ ಬಳಿಕ ಬಂಧಿಸಲ್ಪಟ್ಟ ಚಿರತೆಯನ್ನು ನಾಗೋಡಿ ಸಮೀಪದಲ್ಲಿ ಕೊಲ್ಲೂರು ಮೂಕಾಂಬಿಕಾ ಅಭಯಾರಣ್ಯದಲ್ಲಿ ಬಿಡಲಾಯಿತು.