ಮಂಗಳೂರು, ಮಾ 31(SM): ಎಂ.ಡಿ.ಎಂ.ಎ ಮಾದಕ ವಸ್ತು ಮಾರಾಟ ನಡೆಸುತ್ತಿದ್ದ ಇಬ್ಬರು ಯುವಕರ ಬಂಧಿಸಿರುವ ಘಟನೆ ನಗರದಲ್ಲಿ ನಡೆದಿದೆ. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಮಂಗಳೂರು ಸಿಸಿಬಿ ತಂಡ ಹಾಗೂ ಎಕನಾಮಿಕ್ & ನಾರ್ಕೋಟಿಕ್ಸ್ ಕ್ರೈಂ ಪೊಲೀಸರು ಪಿ.ವಿ.ಎಸ್ ವೃತ್ತದ ಬಳಿಯಿಂದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಟ್ವಾಳ ನಿವಾಸಿ ಜಾವದ್(28) ಹಾಗೂ ತೊಕೊಟ್ಟು ನಿವಾಸಿ ಬೆಂಗ್ರೆ ಶಾನ್ ನವಾಜ್(33) ಬಂಧಿತ ಆರೋಪಿಗಳು. ಆರೋಪಿ ಜಾವದ್ ನ ವಶದಿಂದ 24 ಗ್ರಾಂ ತೂಕದ ಎಂ.ಡಿ.ಎಂ.ಎ. ಪೌಡರ್, ಕೆ.ಟಿ.ಎಂ.ಡ್ಯೂಕ್ ಮೋಟಾರು ಸೈಕಲ್, ಡಿಜಿಟಲ್ ತೂಕದ ಯಂತ್ರ ಹಾಗೂ ಮೊಬೈಲ್ ಪೋನ್ ಮತ್ತು ಶಾನ್ ನವಾಜ್
ವಶದಿಂದ ಮೊಬೈಲ್ ಪೋನ್ ಸೇರಿದಂತೆ ಒಟ್ಟು 2,20,100 ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇನ್ನು ಕಾರ್ಯಾಚರಣೆಯಲ್ಲಿ ಮಂಗಳೂರು ನಗರದ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಆದೇಶದಂತೆ ಪೊಲೀಸ್ ಉಪ ಆಯುಕ್ತ ಹನುಮಂತರಾಯ, ಡಿಸಿಪಿ ಉಮಾ ಪ್ರಶಾಂತ್ ಮಾರ್ಗದರ್ಶನದಲ್ಲಿ ಸಿ.ಸಿ.ಆರ್.ಬಿ ಎಸಿಪಿ ವಿನಯ್ ಗಾಂವ್ಕರ್ ಹಾಗೂ ಸಿಸಿಬಿ ಪೊಲೀಸ್ ಇನ್ಸ್ ಪೆಕ್ಟರ್ ಶಿವಪ್ರಕಾಶ್ ಆರ್ ನಾಯ್ಕ್ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.