ಕುಂದಾಪುರ, ಜೂ 07 (DaijiworldNews/HR): ಶಾಲಾ ವಿದ್ಯಾರ್ಥಿ ನಾಯಕ ಮತ್ತು ಉಪನಾಯಕನ ಆಯ್ಕೆಗಾಗಿ ಸಂಸತ್ತ್ ಮಾದರಿಯ ಚುನಾವಣೆಯನ್ನು ನಡೆಸಲಾಯಿತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಕ್ಕಳಿಗೆ ಚುನಾವಣೆ ಪ್ರಕ್ರಿಯೆಯ ಅರಿವು ಮೂಡಿಸುವ ಉದ್ದೇಶದಿಂದ ಚುನಾವಣೆ ಅಧಿಸೂಚನೆ, ನಾಮಪತ್ರ ಸಲ್ಲಿಕೆ, ಪರಿಶೀಲನೆ, ಹಿಂಪಡೆಯುವುದು, ಚಿಹ್ನೆ ನೀಡುವಿಕೆ, ಪ್ರಚಾರ ಹೀಗೆ ಎಲ್ಲಾ ಹಂತಗಳ ನಂತರ ಮಕ್ಕಳಿಗೆ ಇವಿಎಮ್ ಆ್ಯಪ್ ಮೂಲಕ ಮೊಬೈಲ್ನಲ್ಲಿ ಮತ ಚಲಾಯಿಸಲು ಅವಕಾಶ ನೀಡಲಾಯಿತು. ಮಕ್ಕಳು ತುಂಬಾ ಸಂಭ್ರಮದಿಂದ ಮತ ಚಲಾಯಿಸಿದರು. ನೋಟಕ್ಕೂ ಅವಕಾಶ ನೀಡಲಾಗಿತ್ತು.
ನಾಯಕನ ಸ್ಥಾನಕ್ಕೆ ಮೂವರು ಮತ್ತು ಉಪನಾಯಕನ ಸ್ಥಾನಕ್ಕೆ ಐವರು ವಿದ್ಯಾರ್ಥಿಗಳು ಸ್ಪರ್ಧಿಸಿದ್ದು ಶಾಲಾ ನಾಯಕಿಯಾಗಿ 8ನೇ ತರಗತಿ ಸ್ನೇಹಾ ಮತ್ತು ಉಪನಾಯಕಿಯಾಗಿ 7ನೇ ತರಗತಿ ಅನುಷ್ಕಾ ಆಯ್ಕೆಯಾದರು.
ಚುನಾವಣಾ ಅಧಿಕಾರಿಯಾಗಿ ಸಹ ಶಿಕ್ಷಕ ಆನಂದ ಕುಲಾಲ ಕರ್ತವ್ಯ ನಿರ್ವಹಿಸಿದರೆ ಸಹ ಶಿಕ್ಷಕರಾದ ನಾರಾಯಣ ಅಡಿಗ, ಸಂತೋಷ, ಸಂದ್ಯಾ ಕೆ, ಗೌರವ ಶಿಕ್ಷಕಿಯರಾದ ಪ್ರಮೀಳಾ ಮತ್ತು ಸಯನ ಮತಗಟ್ಟೆ ಅಧಿಕಾರಿಗಳಗಿ ಕರ್ತವ್ಯ ನಿರ್ವಹಿಸಿದರು. ಮುಖ್ಯ ಶಿಕ್ಷಕಿ ಗಿರಿಜಾ ಡಿ. ಮಾರ್ಗದರ್ಶನ ಮಾಡಿದರು.