ಮಂಗಳೂರು, ಜೂ. 6 (DaijiworldNews/SM): ಮಣಿಪುರ ರಾಜ್ಯದಲ್ಲಿ ಮೀಸಲಾತಿ ವಿಚಾರದಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಚರ್ಚ್ ಹಾಗೂ ಕ್ರಿಶ್ಚಿಯನ್ನರ ಮೇಲೆ ನಡೆದ ವ್ಯಾಪಕ ಧಾಳಿಯನ್ನು ಖಂಡಿಸಿ ಹಾಗೂ ಮಣಿಪುರದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಒತ್ತಾಯಿಸಿ ದ.ಕ.ಜಿಲ್ಲಾ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟ, ಕಥೋಲಿಕ್ ಸಭಾ ಮಂಗಳೂರು ಪ್ರದೇಶ(ರಿ) ಮತ್ತು ಯುನೈಟೆಡ್ ಕ್ರಿಶ್ಚಿಯನ್ ಫೋರಂ ಮಂಗಳೂರು ಇದರ ವತಿಯಿಂದ ಮಂಗಳೂರಿನ ಕ್ಲಾಕ್ ಟವರ್ ಮುಂಭಾಗದಲ್ಲಿ ಸಾಮೂಹಿಕ ಧರಣಿ ನಡೆಯಿತು.
ಈ ವೇಳೆ ಸಂಘಟಕರಾದ ರೊಯ್ ಕ್ಯಾಸ್ಟಲಿನೋ, ಸುನಿಲ್ ಕುಮಾರ್ ಬಜಾಲ್, ಆಲ್ಫ್ರೆಡ್ ಮನೋಹರ್, ಸ್ಟ್ಯಾನಿ ಲೋಬೋ, ಕೆ ಅಶ್ರಫ್, ಮಂಜುಳಾ ನಾಯಕ್, ಮುನೀರ್ ಕಾಟಿಪಳ್ಳ, ಸಿಸ್ಟರ್ ಸಿಸಿಲಿಯ ಮೆಂಡೋನ್ಸಾ, ಫಾ. ಜೆ ಬಿ ಸಲ್ಡಾನ್ಹಾ, ಫಾ. ಮ್ಯಾಕ್ಸಿಮ್ ನೊರೊನ್ಹಾ, ಅನೀಲ್ ಸಿಕ್ವೇರಾ, ಫಾ. ಫೌಸ್ಟೀನ್ ಲೋಬೊ, ನೋರಿನ್ ಪಿಂಟೋ, ಲಾರೆನ್ಸ್ ಪಿಂಟೊ, ಮಹಮ್ಮದ್ ಕುಂಜತ್ತ್ಬೈಲ್, ಸುಕುಮಾರ್ ತೊಕ್ಕೋಟ್ಟು ಮತ್ತಿತರರು ಉಪಸ್ಥಿತರಿದ್ದರು.