ಮಂಗಳೂರು, ಜೂ 06 (DaijiworldNews/MS): ಗೃಹ ಸಚಿವ ಡಾ.ಪರಮೇಶ್ವರ್ ಅವರು ಇಂದಿನಿಂದ 2 ದಿನ ದ.ಕ., ಉಡುಪಿ ಜಿಲ್ಲಾಪ್ರವಾಸ ಕೈಗೊಂಡಿದ್ದು ಈ ಹಿನ್ನಲೆ ಮಂಗಳೂರಿನ ಐಜಿಪಿ ಕಚೇರಿಗೆ ಆಗಮಿಸಿ ಪೊಲೀಸರಿಂದ ಗೌರವ ರಕ್ಷೆ ಸ್ವೀಕರಿಸಿದ್ದಾರೆ.
ಗೃಹ ಸಚಿವರಾದ ಬಳಿಕ ಡಾ.ಜಿ.ಪರಮೇಶ್ವರ್ ಮೊದಲ ಬಾರಿಗೆ ಕರಾವಳಿಗೆ ಆಗಮಿಸಿದ್ದು, ಎಡಿಜಿಪಿ ಅಲೋಕ್ ಕುಮಾರ್, ಐಜಿಪಿ ಚಂದ್ರಗುಪ್ತ, ಕಮಿಷನರ್ ಕುಲದೀಪ್ ಜೈನ್ ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳು ಸ್ವಾಗತಿಸಿದರು.
ಈ ವೇಳೆ ದ.ಕ ಎಸ್ಪಿ ರಿಷ್ಯಂತ್, ಉಡುಪಿ ಎಸ್ಪಿ ಅಕ್ಷಯ್, ಉ.ಕ ಎಸ್ಪಿ ವಿಷ್ಣುವರ್ಧನ್, ಚಿಕ್ಕಮಗಳೂರು ಎಸ್ಪಿ ಉಮಾ ಪ್ರಶಾಂತ್ ಉಪಸ್ಥಿತರಿದ್ದರು
ಕೆಲವೇ ಕ್ಷಣಗಳಲ್ಲಿ ಪಶ್ಚಿಮ ವಲಯ ಪೊಲೀಸ್ ಅಧಿಕಾರಿಗಳ ಜೊತೆ ಗೃಹ ಸಚಿವರು ಸಭೆ ನಡೆಸಲಿದ್ದಾರೆ.