ಮಂಗಳೂರು,ಮಾ31(AZM):ದ.ಕ. ಜಿಲ್ಲೆಯ ಸಂಸದರು ಯುವಕರಿಗೆ ಉದ್ಯೋಗದ ಬದಲು ಕೋಮು ಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ.ಪ್ರಚಾರದ ಮೂಲಕ ಅಧಿಕಾರವನ್ನು ತಮ್ಮ ಕೈಗೆ ಹಿಡಿದುಕೊಂಡಿರುವ ಜಿಲ್ಲೆಯ ಸಂಸದರು ಜಿಲ್ಲೆಗಾಗಿ ಏನೂ ಮಾಡಿಲ್ಲ. ಯುವಕರಿಗೆ ಉದ್ಯೋಗದ ಭರವಸೆಯನ್ನು ನೀಡಿದರೂ ಕೂಡಾ ಯಾವುದೇ ರೀತಿಯ ಉದ್ಯೋಗವಕಾಶವೂ ನೀಡಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಹೇಳಿದ್ದಾರೆ.
ಇಂದು ಮಂಗಳೂರಿನಲ್ಲಿ ದ.ಕ. ಜಿಲ್ಲಾ ಕಾಂಗ್ರೆಸ್ ಚುನಾವಣಾ ಪ್ರಚಾರ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಈ ಕುರಿತು ಮಾತನಾಡಿದರು. ಸಂಸದರು ಜಿಲ್ಲೆಯ ಯುವಕರಿಗೆ ಉದ್ಯೋಗದ ಬದಲು ಕೋಮು ಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ. ಜಿಲ್ಲೆಯಲ್ಲಿ ಕೋಮು ಭಾವನೆ ಕೆರಳಿಸುವಂತೆ ಜಿಲ್ಲೆಯ ಸಂಸದರು ಮಾಡಿದ್ದು,ಯುವ ಪೀಳಿಗೆ ಉದ್ಯೋಗಕ್ಕೆ ಹೋಗುವ ಬದಲು ಜೈಲು ಸೇರುವಂತೆ ಮಾಡಿದ್ದಾರೆ.ಇದೇ ಈ ಜಿಲ್ಲೆಯ ಸಂಸದರ ಸಾಧನೆಯಾಗಿದೆ ಎಂದು ಮಿಥುನ್ ರೈ ಯವರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.