ಕಾರ್ಕಳ,ಜೂ 04 (DaijiworldNews/MS): ಒಡಿಶಾದ ಬಾಲಸೋರ್ ನಲ್ಲಿ ಸಂಭವಿಸಿದ ಕೋರಮಂಡಲ್ ಎಕ್ಸ್ಪ್ರೆಸ್ ರೈಲು ಗೂಡ್ಸ್ ರೈಲು ಹಾಗೂ ಬೆಂಗಳೂರು ಹೌರಾ ಎಕ್ಸ್ಪ್ರೆಸ್ ರೈಲುಗಳ ಮುಖಾಮುಖಿ ಡಿಕ್ಕಿ ಯಾಗಿ 233 ಕ್ಕೂ ಹೆಚ್ಚು ಜನ ಮೃತಪಟ್ಟ ಪಟ್ಟಿದ್ದಾರೆ. ಆದರೆ ಹೌರ ಎಕ್ಸ್ಪ್ರೆಸ್ ರೈಲಿನಲ್ಲಿ ಕಳಸದ 110 ಯಾತ್ರಿಕರ ಜೊತೆ ಕಾರ್ಕಳ ಹಾಗೂ ದ.ಕನ್ನಡ ಜಿಲ್ಲೆಗಳ ಒಟ್ಟು 22 ಜನ ಯಾತ್ರಿಕರು ಹೌರದತ್ತ ಪ್ರಯಾಣಿಸುತಿದ್ದರು. ಆದರೆ ರೈಲು ಅಪಘಾತದಲ್ಲಿ ಕಾರ್ಕಳದ ಯಾತ್ರಿಕರಿಗೆ ಯಾವುದೇ ಹಾನಿ ಸಂಭವಿಸಿಲ್ಲ
ಹೌರ ಬೆಂಗಳೂರು ರೈಲಿನಲ್ಲಿ ಕಾರ್ಕಳದ 7 ಜನ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ 15 ಜನ ಪುಣ್ಯಕ್ಷೇತ್ರ ಗಳಿಗೆ ಪ್ರಯಾಣಿಸುತಿದ್ದರು. ಕಾರ್ಕಳ ಜೋಡುರಸ್ತೆ ಯ ಗುಣವರ್ಮ ಜೈನ್ ,ದಿವ್ಯಸ್ತುತಿ ಜೈನ್, ಕಾರ್ಕಳ ತಾಲೂಕಿನ ರೆಂಜಾಳದ ಪ್ರದೀಪ್ ಇಂದ್ರ, ಕೆರುವಾಶೆ ಯ ಸಿಂಹಸೇನೇಂದ್ರ ಕಾರ್ಕಳ ಕಸಬದ ವಿದ್ಯಾನಂದ , ಮಾಳ ಗ್ರಾಮದ ಪುಟ್ಟ ರಾಜಯ್ಯ, ಚಂದ್ರಾವತಿ ವತಿ ದಕ್ಷಿಣ ಕನ್ನಡ ಮೂಡುಬಿದಿರೆಯ ಕಿಶೋರ್ ಕುಮಾರ್, ತ್ರಿಶಾಲ , ಪದ್ಮಶ್ರೀ, ವೇಣೂರಿನ ಆಶಾಲತ, ಮಮತ , ದೀಪಶ್ರೀ, ಮಂಗಳೂರಿನ ಎಂ ಜಿನರಾಜ ಶೆಟ್ಟಿ, ಧರ್ಮಸ್ಥಳದ ಶಾಂತಿನಾಥ, ರಂಜಿತ, ಸೂಕ್ಷ್ಮ , ಜಿತೇಂದ್ರ ಕುಮಾರ್, ಶಾಂತಿಲಾಲ್, ಪ್ರಸನ್ನ ಕುಮಾರಿ, ಧರೆಗುಡ್ಡೆಯ ಪ್ರಭಚಂದ್ರ ಚೌಟ , ವಿಮಲಾವತಿ , ಪ್ರಯಾಣಿಸುತಿದ್ದರು .
ಕಳಸದ ಬಲಿಗೆ ಮಹಿಮಾ ಸಾಗರ ಮುನಿ ಮಹರಾಜರು ಜೂ. 1 ರಿಂದ ಜಾರ್ಖಂಡ್ ಸಮ್ಮೇದ ಶಿಖರ್ಜಿ ಯಾತ್ರೆಯನ್ನು ಸಂಕಲ್ಪಿಸಿದ್ದರು ಅದರಲ್ಲಿ ಒಟ್ಟು ಕಳಸ ಹಾಗು ದ.ಕ ಸೇರಿದಂತೆ ವಿವಿಧ ಜಿಲ್ಲೆಗಳ ಒಟ್ಟು 110 ಜನರ ತಂಡ ಬೆಂಗಳೂರು ಹೌರ ರೈಲಿನಮೂಲಕ ಶಿಖರ್ಜಿ ಯಾತ್ರೆ ಹೊರಟಿದ್ದರು ಜೂನ್ 1 ರಂದು 12 ಘಂಟೆಗೆ ಬೆಂಗಳೂರಿನಿಂದ ಹೊರಟ ಹೌರ ರೈಲು ಜೂ. 2 ರ ರಾತ್ರಿ ಬಾಲಸೋರ್ ತಲುಪಿ ಘಟನೆ ಸಂಭವಿಸಿದೆ .
ಈ ಕಳಸದ ಯಾತ್ರಿಕರ ತಂಡವು ರೈಲಿನ ಇಂಜಿನ್ ಪಕ್ಕದ ಮೊದಲಿನ ಬೋಗಿಯಲ್ಲಿದ್ದರು ಆದರೆ ವಿಶಾಖಪಟ್ಟಣಂ ರೈಲು ನಿಲ್ದಾಣದಲ್ಲಿ ಎಂಜಿನ್ ಅನ್ನು ರೈಲಿನ ಮತ್ತೊಂದು ಬದಿಗೆ ಬದಲಿಸಲಾಗಿತ್ತು. ಆದ್ದರಿಂದ ಕಳಸದ ಯಾತ್ರಿಕರಿದ್ದ ಬೋಗಿ ಅಪಾಯದಿಂದ ತಪ್ಪಿತ್ತು ಎನ್ನುತ್ತಾರೆ ಕಾರ್ಕಳದ ಯಾತ್ರಿ ಗುಣವರ್ಮಜೈನ್
ಜೂನ್2 ರ ಸಂಜೆ ಬಾಲಸೋರ್ ದುರ್ಘಟನೆ ಬಳಿಕ ಹೌರ ಬೆಂಗಳೂರು ಎಕ್ಸ್ಪ್ರೆಸ್ ನ ಅಪಘಾತಕ್ಕಿಡಾಗಿದ್ದ ಮೂರು ಬೋಗಿಗಳನ್ನು ಕಳಚಿ ಉಳಿದ ಬೋಗಿಗಳನ್ನು ರಾತ್ರಿ 12 ಘಂಟೆಯ ವೇಳೆ ಪ್ರಯಾಣ ಮುಂದುವರೆಸಲಾಗಿದೆ. ಜೂನ್ 3 ರ ಬೆಳಗ್ಗೆ ಹೌರ ತಲುಪಬೇಕಿದ್ದ ಹೌರ ಬೆಂಗಳೂರು ಎಕ್ಸ್ಪ್ರೆಸ್ ರೈಲು ಮಧ್ಯಾಹ್ನ 2.10 ಹೌರ ತಲುಪಿದೆ. ಜೂ.4 ರ ಮುಂಜಾನೆ ಜಾರ್ಖಂಡ್ ಪರಶುನಾಥ್ ಸ್ಟೇಷನ್ ತಲುಪಿ ಅಲ್ಲಿಂದ 27 ಕಿ.ಮೀ ಜೈನಧರ್ಮ ದ ಪವಿತ್ರ ಕ್ಷೇತ್ರವಾದ ಶಿಖರ್ಜಿ ಪಾದಯಾತ್ರೆ ಅರಂಭವಾಗಲಿದೆ
ದುರಂತ ಭಯಾನಕವಾಗಿತ್ತು. ಜೋರಾದ ಸದ್ದು ಕೇಳಿ ರೈಲು ನಿಂತಿತ್ತು. ತಕ್ಷಣ 500 ಮೀಟರ್ ದೂರದಲ್ಲಿ ನೋಡಿದಾಗ ದುರಂತ ಸಂಭವಿಸಿದೆ. ಆ ವೇಳೆಗಾಗಲೇ ಪೋಲಿಸ್ ಸೇರಿದಂತೆ ರೈಲುಗಳಲ್ಲಿದ್ದ ಸಾವಿರಾರು ಜನರು ಜಮಾಯಿಸಿದ್ದರು. ಸ್ಥಳೀಯರು ಬೋಗಿಗಳಲ್ಲಿದ್ದ ಜನರನ್ನು ಹೊರಗೆ ಕರೆದುಕೊಂಡು ಬರುತಿದ್ದು ರಕ್ಷಣಾಕಾರ್ಯ ವೇಗವಾಗಿ ನಡೆಯುತಿತ್ತು.ಇದು ನನ್ನ ಮೊದಲನೇ ತೀರ್ಥಯಾತ್ರೆ ಯಾಗಿದ್ದು ನೂರಾರು ಜನರ ಮಾರಣಹೋಮ ಕಂಡು ಗದ್ಗದಿತನಾಗಿದ್ದೆ ಎಂದು ರೈಲಿನಲ್ಲಿದ್ದ ಕಾರ್ಕಳದ ಯಾತ್ರಿಕ ಗುಣವರ್ಮಜೈನ್ ಜೋಡುರಸ್ತೆ ತಿಳಿಸಿದ್ದಾರೆ