ಉಳ್ಳಾಲ, ಜೂ 03 (DaijiworldNews/HR): ನೈತಿಕ ಪೊಲೀಸ್ ಗಿರಿ ಪ್ರಕರಣದಲ್ಲಿ ಅಮಾಯಕರ ಬಂಧನ ನಡೆಸಲಾಗಿದೆ, ಅಶ್ಲೀಲವಾಗಿ ವರ್ತಿಸಿದ ಯುವತಿಯರನ್ನು ಹಾಗೂ ಯುವಕರ ಮೇಲೆ ಕ್ರಮ ಕೈಗೊಂಡಿಲ್ಲ. ಯುವತಿಯರ ಸಂಬಂಧಿಕರು ಹಾಗೂ ಅವರಿಗೆ ಸಂಬಂಧಿಸಿದ ಶಿಕ್ಷಣ ಸಂಸ್ಥೆಯವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಬೇಕು. ಮೂರು ದಿನಗಳ ಒಳಗೆ ಪೊಲೀಸರು ಅವರನ್ನು ಕರೆತಂದು ವಿಚಾರಣೆ ನಡೆಸದೇ ಇದ್ದಲ್ಲಿ ಶಿಕ್ಷಣ ಸಂಸ್ಥೆ ಹಾಗು ಪೊಲೀಸ್ ಠಾಣೆ ಎದುರು ಮಹಿಳೆಯರು ಸೇರಿಕೊಂಡು ಪ್ರತಿಭಟಿಸಲಿದ್ದೇವೆ ಎಂದು ಬಿಜೆಪಿ ಮುಖಂಡೆ ಧನಲಕ್ಷ್ಮೀ ಗಟ್ಟಿ ಹೇಳಿದ್ದಾರೆ.
ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿ ಉಳ್ಳಾಲ ಪೊಲೀಸ್ ಠಾಣೆಗೆ ಮಹಿಳಾ ರಕ್ಷಣಾ ವೇದಿಕೆ ವತಿಯಿಂದ ಠಾಣಾಧಿಕಾರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭ ವೇದಿಕೆಯ ಜಯಲಕ್ಷ್ಮೀ, ಶಶಿಕಲಾ, ರಮಣಿ, ಚೈತ್ರ, ಮಮತಾ, ದಿವ್ಯ, ಐಶ್ವರ್ಯ, ವಿದ್ಯಾ, ರೇವತಿ, ರೇಣುಕಾ, ಮಾಧವಿ, ಪ್ರಮೀಳಾ, ಚಿತ್ರ, ದನು, ಉಷಾ, ಗೀತಾ, ಪಲ್ಲವಿ, ಯಶ್ವಿಜಾ, ಅನ್ವಿತಾ, ಮಂಗಳ, ಮೊನಿಷಾ, ವಾಣಿ, ಸಂಗೀತಾ, ಬಬಿತಾ, ಅನಿತಾ, ಪ್ರಿಯಾಂಕ ಮುಂತಾದವರು ಉಪಸ್ಥಿತರಿದ್ದರು.