ಬೆಳ್ತಂಗಡಿ, ಜೂ 03 (DaijiworldNews/HR): ಒಡಿಶಾದ ಬಾಲಸೋರ್ ಬಳಿ ಶುಕ್ರವಾರ ಸಂಭವಿಸಿದ ಸರಣಿ ರೈಲು ದುರಂತದಲ್ಲಿ ವೇಣೂರಿನ ಮೂವರು ಪ್ರಯಾಣಿಕರು ಸಿಲುಕಿದ್ದು, ಯಾವುದೇ ತೊಂದರೆಯಾಗದೆ ಪಾರಾಗಿದ್ದಾರೆ.
ವೇಣೂರಿನ ಮಮತಾ ಪ್ರಸಾದ್ ಜೈನ್,ಆಶಾ ಜೈನ್, ದೀಪಶ್ರೀ ಕತ್ತೋಡಿ ವೇಣೂರು ಇವರು ಜೈನರ ತೀರ್ಥಕ್ಷೇತ್ರ ಸಮ್ಮೇದ ಶಿಖರ್ಜಿಗೆ ಯಾತ್ರೆ ಹೊರಟಿದ್ದರು.
ಈ ಮೂವರು ವೇಣೂರಿನಿಂದ ಕಳಸಕ್ಕೆ ತೆರಳಿ ಕಳಸದಿಂದ 110 ಜನ ಯಾತ್ರಿಗಳು ಬಸ್ಸಿನ ಮೂಲಕ ಬೆಂಗಳೂರಿಗೆ ತೆರಳಿ ಅಲ್ಲಿಂದ ರೈಲಿನ ಮೂಲಕ ಪ್ರಯಾಣ ಬೆಳೆಸಿದ್ದರು ಎನ್ನಲಾಗಿದೆ.
ಇನ್ನು ಅಪಘಾತವಾದ ರೈಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 21 ಮಂದಿ ಇದ್ದರು ಎಂದು ತಿಳಿದು ಬಂದಿದೆ.