ಕಾಸರಗೋಡು, ಜೂ 03 (DaijiworldNews/MS): ಅಣ್ಣನೇ ತನ್ನ ಸಹೋದರನನ್ನು ಇರಿದು ಕೊಲೆಗೈದ ಘಟನೆ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಪೈವಳಿಕೆ ಯಲ್ಲಿ ಜೂ.೦೩ ರ ಶನಿವಾರ ಬೆಳಿಗ್ಗೆ ನಡೆದಿದೆ.
ಪ್ರಭಾಕರ ನೋಂಡಾ
ಪ್ರಭಾಕರ ನೋಂಡಾ
ಪೈವಳಿಕೆ ಕಳಾಯಿಯ ಪ್ರಭಾಕರ ನೋಂಡಾ (40) ಕೊಲೆಗೀಡಾದವರು. ಸಹೋದರ ಜಯರಾಮ ನೋಂಡಾ ಈ ಕೃತ್ಯ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸಹೋದರರ ನಡುವಿನ ವೈಷಮ್ಯ ಕೊಲೆಗೆ ಕಾರಣ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ. ಮಂಜೇಶ್ವರ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ಆರಂಭಿಸಿದ್ದಾರೆ. ಪ್ರಭಾಕರನ ವಿರುದ್ದ ಹಲವು ಪ್ರಕರಣ ಗಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.